ADVERTISEMENT

ಯಶ್ ಶೆಟ್ಟಿ ನಟನೆಯ ಜಂಗಲ್ ಮಂಗಲ್ ಚಿತ್ರೀಕರಣ ಪೂರ್ಣ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 14:34 IST
Last Updated 6 ಅಕ್ಟೋಬರ್ 2024, 14:34 IST
ಹರ್ಷಿತಾ ರಾಮಚಂದ್ರ, ಯಶ್‌ ಶೆಟ್ಟಿ
ಹರ್ಷಿತಾ ರಾಮಚಂದ್ರ, ಯಶ್‌ ಶೆಟ್ಟಿ   

ನಿರ್ದೇಶಕ ಸಿಂಪಲ್ ಸುನಿ ಕುವೆಂಪು ಅವರ ಕೃತಿಯೊಂದನ್ನು ಸಿನಿಮಾವಾಗಿಸುವುದಾಗಿ ಘೋಷಿಸಿದ್ದರು. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರಕ್ಕೆ ‘ಜಂಗಲ್ ಮಂಗಲ್’ ಎಂದು ಹೆಸರಿಡಲಾಗಿದೆ. ಯಶ್‌ ಶೆಟ್ಟಿ ಚಿತ್ರದ ನಾಯಕ.

‘ಇದು ಅರೆ ಮಲೆನಾಡಿನ ಕಾಡಿನಲ್ಲಿ ನಡೆಯುವ ಕಥೆ. ಅರೆ ಮಲೆನಾಡು ಎಂದರೆ ಘಟ್ಟದ ಮೇಲ್ಭಾಗ ಹಾಗೂ ಘಟ್ಟದ ಕೆಳಭಾಗ ಸಂಧಿಸುವ ಊರು. ಅಲ್ಲಿ ವಿವಿಧ ಸಂಸ್ಕೃತಿಯ ಜನರು ಇರುತ್ತಾರೆ. ಅಲ್ಲೊಂದು ದಟ್ಟವಾದ ಕಾಡು. ಆ ಕಾಡಿನಲ್ಲಿ ನಡೆಯುವ ಪ್ರೇಮಕಥೆಯೂ ಈ ಚಿತ್ರದಲ್ಲಿದೆ‌. ಚಿತ್ರದ ಅರ್ಧಕ್ಕೂ ಹೆಚ್ಚಿನ ಭಾಗದ ಚಿತ್ರೀಕರಣ ಸುಬ್ರಹ್ಮಣ್ಯದ ಬಳಿಯ ಕಾಡಿನಲ್ಲೇ ನಡೆದಿದೆ. ಇನ್ನೊಂದು ತಿಂಗಳಲ್ಲಿ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತದೆ’ ಎಂದರು ನಿರ್ದೇಶಕ ಸುನಿ.

ಯಶ್ ಶೆಟ್ಟಿಗೆ ಜೋಡಿಯಾಗಿ ಹರ್ಷಿತಾ ರಾಮಚಂದ್ರ ಕಾಣಿಸಿಕೊಂಡಿದ್ದಾರೆ. ಉಗ್ರಂ ಮಂಜು, ಬಲ ರಾಜವಾಡಿ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ಸಹ್ಯಾದ್ರಿ ಸ್ಟುಡಿಯೋಸ್ ಸಂಸ್ಥೆ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ಪ್ರಸಾದ್ ಶೆಟ್ಟಿ, ಪೂರ್ಣಚಂದ್ರ ತೇಜಸ್ವಿ ಸಂಗೀತ, ವಿಷ್ಣುಪ್ರಸಾದ್‌ ಛಾಯಾಚಿತ್ರಗ್ರಹಣ, ಮಂಜು ಶೇಡ್ಗಾರ್ ಸಂಕಲನವಿದೆ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.