ಬಹುತೇಕ ಹೊಸಬರಿಂದಲೇ ಕೂಡಿರುವ 'ಪರಿಸ್ಥಿತಿ' ಚಿತ್ರ ಇತ್ತೀಚೆಗಷ್ಟೇ ತೆರೆ ಕಂಡಿದೆ. ಆರ್.ಎಸ್.ಗಣೇಶ್ ನಾರಾಯಣ್ ನಿರ್ದೇಶನದ ಚಿತ್ರಕ್ಕೆ ಎಂಸಿಎಂ ಆರಾಧ್ಯ ಬಂಡವಾಳ ಹೂಡಿದ್ದಾರೆ.
'ಚಿತ್ರ ಬಿಡಿಸುವ ಕಲಾವಿದನ ಕಥೆ. ರಸ್ತೆಯಲ್ಲಿ ಭಿಕ್ಷೆ ಬೇಡುತ್ತ, ಚಿತ್ರ ಬಿಡಿಸುವ ಕಲಾವಿದನ ಪರಿಸ್ಥಿತಿ ಅವಲೋಕನವಿದು. ಏಕೆ ಅವನು ಈ ರೀತಿ ಪ್ರತಿಭೆ ಇಟ್ಟಿಕೊಂಡು ರಸ್ತೆಯಲ್ಲಿದ್ದಾನೆ. ಜೀವನ ಹೇಗಿದೆ ಎಂಬಿತ್ಯಾದಿ ಅಂಶಗಳನ್ನು ಒಳಗೊಂಡ ಕಥೆ. ಅವನಿಗೆ ಒಳ್ಳೆ ಅವಕಾಶ ಸಿಕ್ಕರೆ ಏನಾಗುತ್ತದೆ ಎಂಬುದೇ ಚಿತ್ರ. ಸಾಕಷ್ಟು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಲಭಿಸಿದೆ. ಎಲ್ಲ ವಯೋಮಾನದವರು ನೋಡಬಹುದಾದ ಚಿತ್ರ. ನ.22ರಂದು ಚಿತ್ರ ತೆರೆಕಂಡಿದ್ದು, ಜನರಿಂದ ಕೂಡ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ' ಎನ್ನುತ್ತಾರೆ ನಿರ್ದೇಶಕರು.
'ರೋಟರಿ ಸಂಸ್ಥೆಗಾಗಿ ಮಾಡಿರುವ ಆರೋಹಣ ಪ್ರಾಜೆಕ್ಟ್ ಮೂಲಕ ಈ ಚಿತ್ರ ನಿರ್ಮಾಣಗೊಂಡಿದೆ. ಇದರಲ್ಲಿ ಬರುವ ಹಣವನ್ನು ರಸ್ತೆಯಲ್ಲಿರುವ ಭಿಕ್ಷುಕರಿಗೆ ಸಹಾಯ ಮಾಡಲು ಬಳಸುತ್ತೇವೆ' ಎಂದರು ನಿರ್ಮಾಪಕರು.
ನಿರ್ದೇಶಕರೇ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಗೌತಮ್ ಮನು ಛಾಯಾಚಿತ್ರಗ್ರಹಣವಿದೆ. ನರ್ಮತಾ, ಅಜಿತ್ ಕುಮಾರ್ ಮುಂತಾದವರು ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.