ADVERTISEMENT

ಸಂದರ್ಶನ: ದಮನಕನ ಜೊತೆ ಶಿವಣ್ಣ ಕರಟಕ...

ಪ್ರಜಾವಾಣಿ ವಿಶೇಷ
Published 1 ಮಾರ್ಚ್ 2024, 0:05 IST
Last Updated 1 ಮಾರ್ಚ್ 2024, 0:05 IST
<div class="paragraphs"><p>ಶಿವಣ್ಣ</p></div>

ಶಿವಣ್ಣ

   

ಯೋಗರಾಜ್‌ ಭಟ್ಟರ ಗರಡಿಯಲ್ಲಿ ಅನುಭವ ಹೇಗಿತ್ತು?

ಯೋಗರಾಜ್‌ ಭಟ್ಟರ ಜೊತೆ ಸಿನಿಮಾ ಮಾಡಬೇಕೆಂಬ ಹಂಬಲ ‘ಪರಮಾತ್ಮ’ ಸಮಯದಿಂದ ಇತ್ತು. ಅವರು ನನ್ನ ನೆಚ್ಚಿನ ನಿರ್ದೇಶಕ. ಅವರ ಸಿನಿಮಾದಲ್ಲಿ ಹ್ಯೂಮರ್‌ ಇರುತ್ತದೆ. ಅದರ ಜೊತೆಗೆ ಮಾನವೀಯ ಮೌಲ್ಯಗಳು ಇರುತ್ತವೆ. ಅದನ್ನು ಮನರಂಜನಾತ್ಮಕವಾಗಿ ಹೇಳುತ್ತಾರೆ. ಈ ಸಿನಿಮಾದಿಂದ ನನ್ನ ಬಯಕೆ ಪೂರ್ತಿಯಾಗಿದೆ.

ADVERTISEMENT

ಚಿತ್ರದಲ್ಲಿ ನಿಮ್ಮ ಪಾತ್ರವೇನು?

ಇದು ‘ಕರಟಕ’ ಮತ್ತು ‘ದಮನಕ’ ಎಂಬ ಎರಡು ನರಿಗಳ ಕಥೆ. ನನ್ನದು ಕರಟಕನ ಪಾತ್ರ. ಕಾಡಿನಲ್ಲಿ ಸಿಂಹ ರಾಜನಾಗಿರುತ್ತಾನೆ. ಅವನಿಗೆ ತಲೆ ಕೆಡಿಸುವುದು ನಮ್ಮ ಕೆಲಸ. ಒಂದು ಮುದಿ ಎತ್ತು ಕಾಡಿಗೆ ಬಂದಿರುತ್ತದೆ. ಅದಕ್ಕೆ ಉಬ್ಬಿಸಿ, ನಂಬಿಸಿ ಮೋಸ ಮಾಡುತ್ತೇವೆ. ಇಬ್ಬರು ಭಯಾನಕ ಕುತಂತ್ರಿಗಳ ಪಯಣವಿದು. ಕಳ್ಳತನವನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ರೀತಿಯ ಪಾತ್ರ. 

ಈ ಸಿನಿಮಾ ನಿಮಗೆ ಏಕೆ ವಿಶೇಷ?

‘ಟಗರು’ ಬಿಟ್ಟರೆ ಇತ್ತೀಚಿನ ಉಳಿದೆಲ್ಲ ಚಿತ್ರಗಳ ಪಾತ್ರಗಳಲ್ಲಿ ದಾಡಿ ಇತ್ತು. ಆದರೆ ಈ ಸಿನಿಮಾದಲ್ಲಿ ನನಗೆ ದಾಡಿ ಇಲ್ಲ. ‘ಇನ್ಸ್‌ಪೆಕ್ಟರ್‌ ವಿಕ್ರಂ’ ಸಮಯದ ಶಿವಣ್ಣ ಇಲ್ಲಿ ಕಾಣಿಸುತ್ತಾರೆ. ಪ್ರಭುದೇವ ಅವರ ಜೊತೆಗೆ ಮೊದಲ ಸಿನಿಮಾ. ಅವರದ್ದೇ ಕೋರಿಯೋಗ್ರಫಿ ಇದೆ. ಹೀಗಾಗಿ ಇಲ್ಲಿ ಮೂಮೆಂಟ್ಸ್‌ ಭಿನ್ನವಾಗಿವೆ. ತೂಕ ಇರುವಲ್ಲಿ ತುಳುಕಲ್ಲ, ಪ್ರಭುದೇವ ಬಹಳ ಒಳ್ಳೆಯ ವ್ಯಕ್ತಿ. ಬಹಳ ಅದ್ಭುತವಾಗಿ ಡ್ಯಾನ್ಸ್‌ ಕಲಿಸಿದರು.

ಈ ಸಿನಿಮಾದಿಂದ ಶಿವಣ್ಣ ಅಭಿಮಾನಿಗಳು ಏನು ನಿರೀಕ್ಷಿಸಬಹುದು?

ಮನರಂಜನೆ ಇದೆ. ಅದರ ಹೊರತಾಗಿ ಏನು ತೆಗೆದುಕೊಂಡು ಹೋಗುತ್ತಿದ್ದೇವೆ ಎಂಬುದು ಮುಖ್ಯ. ‘ಜೋಗಿ’ಯಲ್ಲಿ ತಾಯಿಯ ಫೀಲ್‌, ‘ಟಗರು’ವಿನಲ್ಲಿ ನಾಯಕನ ಪಾತ್ರ, ‘ಮಫ್ತಿ’ಯಲ್ಲಿ ಬೈರತಿ ರಣಗಲ್‌ನ ಶಕ್ತಿ...ಹೀಗೆ ಪ್ರತಿ ಚಿತ್ರದಲ್ಲೂ ಒಂದೊಂದು ಫೀಲ್‌ ತೆಗೆದುಕೊಂಡು ಹೋಗುತ್ತೇವೆ. ಇದರಲ್ಲಿ ಕಾಮಿಡಿ ಜೊತೆಗೆ ಕನ್ನಿಂಗ್‌ ಇರುವ ಕುತಂತ್ರಿಗಳ ಪಯಣ, ಊರು, ಅಲ್ಲಿನ ಮೌಲ್ಯಗಳನ್ನು ತೆಗೆದುಕೊಂಡು ಹೋಗುತ್ತಾರೆ. ನರಿ ಮುಖ ನೋಡಿದರೆ ಒಳ್ಳೆಯದು ಎನ್ನುತ್ತಾರೆ. ಒಳ್ಳೆಯದು, ಕೆಟ್ಟದ್ದು ಮುಖದ ನರಿಯನ್ನು ತೋರಿಸುವ ಇರುವ ಸಿನಿಮಾ.

ಬಹಳ ವರ್ಷದ ನಂತರ ರಗಡ್‌ ಲುಕ್‌ನಿಂದ ಆಚೆ ಬಂದಿರುವಿರಾ?

ಹೌದು. ಮೊದಲೇ ಹೇಳಿದಂತೆ ಇದೊಂದು ಕನ್ನಿಂಗ್‌ ಪಾತ್ರ. ಹೀಗಾಗಿ ಇಲ್ಲಿ ರಗಡ್‌ ಇಲ್ಲ. ಒಂದು ರೀತಿಯಲ್ಲಿ ಕಾಮಿಡಿ ಲುಕ್‌ನಲ್ಲಿ ಕಾಣಿಸುತ್ತೇನೆ. ಹೀಗಾಗಿ ಈ ಪಾತ್ರ ಫ್ರೆಷ್‌ ಅನ್ನಿಸುತ್ತಿದೆ.

ಯಾರಾದರೂ ಶಿವಣ್ಣನ ಗಮನ ಸೆಳೆಯಬೇಕೆಂದರೆ ಏನು ಮಾಡಬೇಕು?

ಯಾರಾದರೂ ಚೆನ್ನಾಗಿ ಡ್ಯಾನ್ಸ್‌ ಮಾಡಿದರೆ ತಿರುಗಿ ನೋಡುತ್ತೇನೆ. 

ಬಾಲಿವುಡ್‌ನಲ್ಲಿ ಸಿನಿಮಾ ಮಾಡುತ್ತಿದ್ದೀರಾ?

ಬಾಲಿವುಡ್‌ನಿಂದ ಆಫರ್‌ ಬಂದಿದ್ದು ನಿಜ. ಆದರೆ ಯಾವುದೂ ಇನ್ನು ಅಂತಿಮವಾಗಿಲ್ಲ. ‘ಜೈಲರ್‌–2’ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಸದ್ಯ ‘ಬೈರತಿ ರಣಗಲ್‌’ ಚಿತ್ರೀಕರಣದಲ್ಲಿ ಮಗ್ನನಾಗಿರುವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.