ಮೈಸೂರಿನ ಡಾ.ಚಿದಾನಂದ ಎಸ್ ನಾಯ್ಕ್ ನಿರ್ದೇಶಿಸಿರುವ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ ಕನ್ನಡ ಕಿರುಚಿತ್ರ ಲೈವ್ ಆ್ಯಕ್ಷನ್ ಶಾರ್ಟ್ ಫಿಲಂ ವಿಭಾಗದಡಿ 2025ನೇ ಸಾಲಿನ ಆಸ್ಕರ್‌ಗೆ ಅರ್ಹತೆ ಪಡೆದಿದೆ. ಆಸ್ಕರ್ ಅಂಗಳ ತಲುಪಿದ ಕನ್ನಡದ ಮೊದಲ ಕಿರುಚಿತ್ರವಾಗಿದೆ. ಈ ಕಿರುಚಿತ್ರವು 77ನೇ ಕಾನ್ ಚಿತ್ರೋತ್ಸವದಲ್ಲಿ ‘ಲಾ ಸಿನೆಫ್’ ವಿಭಾಗದಲ್ಲಿ ಮೊದಲ ಬಹುಮಾನ ಪಡೆದಿತ್ತು.
ಪ್ರತಿದಿನ ಬೆಳಗ್ಗೆ ಸೂರ್ಯೋದಯಕ್ಕೆ ಕಾರಣವೆಂದು ಎಲ್ಲರೂ ನಂಬಿದ್ದ ಹುಂಜದೊಂದಿಗೆ ಅಜ್ಜಿ ಓಡಿಹೋಗುವ ಜನಪದ ಕಥಾವಸ್ತುವನ್ನು ಹೊಂದಿರುವ 16 ನಿಮಿಷಗಳ ಅವಧಿಯ ಕಿರುಚಿತ್ರ ಇದಾಗಿದೆ.
ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ (ಎಫ್‌ಟಿಐಐ) ವಿದ್ಯಾರ್ಥಿ ವಿಭಾಗದಡಿ ಈ ಕಿರುಚಿತ್ರವನ್ನು ನಿರ್ಮಾಣ ಮಾಡಿದೆ. ಕನ್ನಡದ ಜನಪ್ರಿಯ ನಟ ಎಂ.ಎಸ್.ಜಹಾಂಗೀರ್ ಅಜ್ಜನಾಗಿ ನಟಿಸಿದ್ದಾರೆ. ಸೂರಜ್ ಠಾಕೂರ್ ಛಾಯಾಚಿತ್ರಗ್ರಹಣ, ಮನೋಜ್ ವಿ ಸಂಕಲನ, ಅಭಿಷೇಕ್ ಕದಂ ಶಬ್ಧ ವಿನ್ಯಾಸ ಈ ಕಿರುಚಿತ್ರಕ್ಕಿದೆ.
‘ವೃತ್ತಿಯಿಂದ ವೈದ್ಯ. ಆಸಕ್ತಿಯಿಂದಾಗಿ ಸಿನಿಮಾ ನಿರ್ದೇಶನ ಕೋರ್ಸ್‌ಗೆ ಸೇರಿಕೊಂಡೆ. ನಮ್ಮಲ್ಲಿ ಈ ರೀತಿ ಜನಪದ ಕಥೆ ಹೇಳುವ ತಲೆಮಾರು ಮರೆಯಾಗುತ್ತಿದೆ. ಅಲ್ಲದೆ ಈ ಕಥೆ ಕರ್ನಾಟಕದಿಂದ ಆಚೆಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹೀಗಾಗಿ ಈ ವಿಷಯ ಆಯ್ದುಕೊಂಡೆ’ ಎನ್ನುತ್ತಾರೆ ಚಿದಾನಂದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.