ADVERTISEMENT

ನಾಯಕ ನಟರ ಸಂಭಾವನೆ ಹೆಚ್ಚಳ: ನಿರ್ಮಾಪಕ ಕರಣ್‌ ಜೋಹರ್‌ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 12:15 IST
Last Updated 28 ಡಿಸೆಂಬರ್ 2021, 12:15 IST
 ಕರಣ್‌ ಜೋಹರ್‌
ಕರಣ್‌ ಜೋಹರ್‌    

ಮುಂಬೈ: ಬಾಲಿವುಡ್‌ನಲ್ಲಿ ಯುವ ನಾಯಕ ನಟರು ಕೋವಿಡ್ ಪರಿಸ್ಥಿತಿಯಲ್ಲಿ ಸಂಭಾವನೆ ಹೆಚ್ಚಿಸಿಕೊಂಡಿರುವುದುಒಳ್ಳೆಯ ಬೆಳವಣಿಗೆಯಲ್ಲ ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಕರಣ್‌ ಜೋಹರ್‌ ಹೇಳಿದ್ದಾರೆ.

ನಿರ್ಮಾಪಕರ ಜೊತೆ ನಡೆಸಿದ ದುಂಡು ಮೇಜಿನ ಮಾತುಕತೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಸಭೆಯಲ್ಲಿ ನಿರ್ಮಾಪಕರಾದ ಜೋ. ಅಕ್ತರ್‌, ನಿಖಿಲ್‌ ಅಡ್ವಾಣಿ, ಸಮೀರ್‌ ನಾಯರ್‌, ರೀಮಾ ಸೇರಿದಂತೆ ಹಲವಾರು ಬಾಲಿವುಡ್‌ ನಿರ್ಮಾಪಕರು ಭಾಗವಹಿಸಿದ್ದರು.

ADVERTISEMENT

ಉದ್ಯಮದಲ್ಲಿ ಶೇ 10ರಿಂದ 20ರಷ್ಟು ಸಂಭಾವನೆ ಹೆಚ್ಚಿಸಿಕೊಂಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ ಆದರೆ ಶೇ 50 ಕ್ಕಿಂತ ಹೆಚ್ಚಿಗೂ ಜಾಸ್ತಿಮಾಡಿಕೊಂಡಿದ್ದಾರೆ. ಇನ್ನು ಕೆಲವರು ಶೇ 100ರಷ್ಟು ಹೆಚ್ಚಳ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ಸಿನಿಮಾದ ಒಟ್ಟಾರೆ ಬಂಡಾವಳವೇ ₹ 30–₹40 ಕೋಟಿ ಇರುವಾಗ ನಟರಿಗೆ ₹15 ರಿಂದ ₹20 ಕೋಟಿ ಎಲ್ಲಿಂದ ತರುವುದು ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ನಿರ್ಮಾಪಕರು, ವಿತರಕರು, ಸಿನಿಮಾರಂಗದ ದಿನಗೂಲಿ ನೌಕರರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ ಎಂದು ಕರಣ್‌ ಜೋಹರ್‌ ಅಭಿಪ್ರಾಯಪಟ್ಟಿದ್ದಾರೆ.

ಕಳೆದ 18 ತಿಂಗಳುಗಳಿಂದ ಕೋವಿಡ್‌ ಪರಿಸ್ಥಿತಿಯಲ್ಲಿ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲವಾದ್ದರಿಂದ ವಿತರಕರಿಗೆ ಸಮಸ್ಯೆಯಾಗಿದೆ. ಸರಿಯಾಗಿ ಚಿತ್ರೀಕರಣಗಳು ನಡೆಯುತ್ತಿಲ್ಲವಾದ್ದರಿಂದ ಸಿನಿಮಾ ಕಾರ್ಮಿಕರು ಮತ್ತು ದಿನಗೂಲಿ ನೌಕರರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ನಿರ್ಮಾಪಕರು ಹೇಳಿದ್ದಾರೆ.

ಯುವ ನಟರ ಸಂಭಾವನೆ ಹೆಚ್ಚಳದ ಬಗ್ಗೆ ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದರು ಎಂದು ಬಾಲಿವುಡ್‌ ಹಂಗಾಮ ಪತ್ರಿಕೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.