ADVERTISEMENT

ಬದಲಾದ ‘ಮಿತ್ರ’ನ ಲುಕ್‌

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 0:34 IST
Last Updated 20 ಜುಲೈ 2024, 0:34 IST
ಮಿತ್ರ
ಮಿತ್ರ   

ನಟ ಮಿತ್ರ ಎಂದಾಕ್ಷಣ ನೆನಪಾಗುವುದು ಅವರು ನಿಭಾಯಿಸಿದ ಹಾಸ್ಯಪಾತ್ರಗಳು. 2003ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಮಿತ್ರ ಹಿರಿತೆರೆ, ಕಿರುತೆರೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅವರು ನಟಿಸಿದ ಬಹುತೇಕ ಎಲ್ಲ ಪಾತ್ರಗಳೂ ಹಾಸ್ಯ ಪ್ರಧಾನವಾಗಿದ್ದವು. ಇದೀಗ ತಮ್ಮ ಮತ್ತೊಂದು ಮುಖ ತೋರಿಸಲು ಸಜ್ಜಾಗಿದ್ದಾರೆ ಮಿತ್ರ. 

100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಮಿತ್ರ ‘ಸಿಲ್ಲಿ ಲಲ್ಲಿ’, ‘ಪಾಪ ಪಾಂಡು’ ಮೊದಲಾದ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಬಿಗ್‌ಬಾಸ್‌ ಮೂರನೇ ಆವೃತ್ತಿಯ ಸ್ಪರ್ಧಿಯಾಗಿಯೂ ಮಿತ್ರ ಜನರಿಗೆ ಪರಿಚಿತ. ಇದೀಗ ತಮ್ಮ ಖದರ್‌ ಬದಲಾಯಿಸಿಕೊಂಡಿರುವ ಮಿತ್ರ, ‘ಕರಾವಳಿ’ ಸಿನಿಮಾದಲ್ಲಿ ಖಳನಟನಾಗಿ ಪ್ರೇಕ್ಷಕರ ಎದುರಿಗೆ ಬರಲಿದ್ದಾರೆ. ಪ್ರಜ್ವಲ್ ದೇವರಾಜ್ ನಟನೆಯ ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಸಿನಿಮಾದಲ್ಲಿ ಮುಖ್ಯಪಾತ್ರವೊಂದರಲ್ಲಿ  ಅಭಿನಯಿಸುತ್ತಿದ್ದಾರೆ. ಉದ್ದಗೆ ಬಿಳಿಗಡ್ಡ ಬಿಟ್ಟಿರುವ ಮಿತ್ರ, ಸ್ಟೈಲಿಷ್ ವಿಲನ್ ಲುಕ್‌ನಲ್ಲಿ ಫೋಟೊಶೂಟ್‌ ಕೂಡಾ ಮಾಡಿಸಿಕೊಂಡಿದ್ದಾರೆ. ‘ಕರಾವಳಿ’ ಸಿನಿಮಾದ ಸಿನಿಮಾಟೋಗ್ರಾಫರ್‌ ಅಭಿಮನ್ಯು ಸದಾನಂದ್ ಮಿತ್ರ ಅವರನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

‘ಕರಾವಳಿ’ ಸಿನಿಮಾ ಜೊತೆಗೆ ಕನ್ನಡದ ಸ್ಟಾರ್ ನಟರ ಸಿನಿಮಾಗಳಲ್ಲೂ ಖಳನಾಯಕನ ಪಾತ್ರಕ್ಕೆ ಬಣ್ಣಹಚ್ಚುತ್ತಿದ್ದಾರೆ. ಜೊತೆಗೆ ತಮಿಳಿನ ಒಂದು ಸಿನಿಮಾಗೂ ವಿಲನ್ ಆಗಿ ಆಯ್ಕೆ ಆಗಿದ್ದಾರೆ. ‘ಕಲಾವಿದ ಆದವನು ಎಂದಿಗೂ ಒಂದೇ ಪಾತ್ರಕ್ಕೆ ಅಂಟಿಕೊಳ್ಳಬಾರದು. ವಯಸ್ಸಿಗೆ ತಕ್ಕಂತೆ ತಮ್ಮನ್ನು ತಾವು ಬದಲಾಯಿಸಿಕೊಳ್ಳಬೇಕು’ ಎಂಬುವುದು ಅಭಿಮತ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.