ADVERTISEMENT

ಕರಾವಳಿಯಲ್ಲಿ ಪ್ರಜ್ವಲ್‌ ಭಿನ್ನ ಪಾತ್ರ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 18:26 IST
Last Updated 15 ಜುಲೈ 2024, 18:26 IST
   

ಫೆಬ್ರುವರಿಯಲ್ಲಿ ಸೆಟ್ಟೇರಿದ್ದ ಪ್ರಜ್ವಲ್‌ ದೇವರಾಜ್‌ ನಟನೆಯ 40ನೇ ಸಿನಿಮಾ ‘ಕರಾವಳಿ’ಯ ಚಿತ್ರೀಕರಣ ಅಂತಿಮ ಹಂತ ತಲುಪಿದ್ದು, ಚಿತ್ರದಲ್ಲಿ ಪ್ರಜ್ವಲ್‌ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಇತ್ತೀಚೆಗೆ ಸಿನಿಮಾದಲ್ಲಿನ ಅವರ ಪಾತ್ರದ ಫೋಟೊವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಫಸ್ಟ್‌ಲುಕ್‌ನಲ್ಲಿ ಕೋಣದ ಮೇಲೆ ಕುಳಿತಿದ್ದ ಮಹಿಷಾಸುರನಾಗಿ ಕಾಣಿಸಿಕೊಂಡಿದ್ದ ಪ್ರಜ್ವಲ್‌ ನಂತರ ಯಕ್ಷಗಾನದ ವೇಷ ಧರಿಸಿದ್ದರು. ಇದೀಗ ಕೊಟ್ಟಿಗೆಯಲ್ಲಿ ಕಂಬಳದ ಕೋಣಗಳ ನಡುವೆ ಕುಳಿತು ಪೋಸ್‌ ನೀಡಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್ ಯಕ್ಷಗಾನ ಕಲಾವಿದನಾ ಅಥವಾ ಕಂಬಳ ಓಡಿಸುವವನೇ ಹೀಗೆ ಡೈನಾಮಿಕ್ ಪ್ರಿನ್ಸ್ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ‘ಕರಾವಳಿ’ಯ ಚಿತ್ರೀಕರಣ ಈಗಾಗಲೇ ಶೇ 60ರಷ್ಟು ಪೂರ್ಣಗೊಂಡಿದೆ. ಸಿನಿಮಾದಲ್ಲಿ ಪ್ರಜ್ವಲ್‌ಗೆ ನಾಯಕಿಯಾಗಿ ಸಂಪದಾ ನಟಿಸಿದ್ದಾರೆ. ಸಿನಿಮಾ ಬಹುತೇಕ ಕರಾವಳಿಯ ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಅವರದೇ ಗಾಣಿಗ ಫಿಲ್ಮ್ಸ್‌ ಹಾಗೂ ವಿಕೆ ಫಿಲಂ ಅಸೋಸಿಯೇಷನ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ‘ಕರಾವಳಿ’ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT