ADVERTISEMENT

'ಕಾಶ್ಮೀರ್ ಫೈಲ್ಸ್' ಅಸಭ್ಯ,ಕೀಳು ಅಭಿರುಚಿದ್ದು: ಸ್ಪರ್ಧೆಯ ತೀರ್ಪುಗಾರರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 20:08 IST
Last Updated 28 ನವೆಂಬರ್ 2022, 20:08 IST
   

ಪಣಜಿ: ‘ಕಾಶ್ಮೀರ್‌ ಫೈಲ್ಸ್‌’ ಅಸಭ್ಯ, ಕೀಳು ಅಭಿರುಚಿಯ ಚಿತ್ರ. ಪ್ರಚಾರದ ಉದ್ದೇಶದ ಈ ಚಿತ್ರವು ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಿಸಲು ಸೂಕ್ತವಾದುದಲ್ಲ’ ಎಂದು ಐಎಫ್‌ಎಫ್‌ಐ ಅಂತರರಾಷ್ಟ್ರೀಯ ಸ್ಪರ್ಧೆ ವಿಭಾಗದ ತೀರ್ಪುಗಾರರಾದ ನಾಡವ್ ಲ್ಯಾಪಿಡ್‌ ಹೇಳಿದ್ದಾರೆ.

ಬಾಲಿವುಡ್ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಈ ಚಿತ್ರದ ನಿರ್ದೇಶಕರು. ಇಲ್ಲಿ ನಡೆದ ಒಂಭತ್ತು ದಿನಗಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕಡೆಯ ದಿನವಾದ ಸೋಮವಾರ ಲ್ಯಾಪಿಡ್‌ ಈ ಮಾತು ಹೇಳಿದರು. ವಿವಾದಕ್ಕೆ ಕಾರಣವಾಗಿದ್ದ ಈ ಚಿತ್ರ ದೇಶವ್ಯಾಪಿ ತೀವ್ರ ಚರ್ಚೆಗೂ ಗ್ರಾಸವಾಗಿತ್ತು.

‘ಸ್ಪರ್ಧೆಗೆ ಬಂದಿದ್ದ 15ರಲ್ಲಿ 14ಕ್ಕೆ ಚಲನಚಿತ್ರದ ಲಕ್ಷಣಗಳಿದ್ದು, ಚರ್ಚೆಗೆ ಒಳಪಟ್ಟವು. 15ನೇ ಚಿತ್ರ, ‘ಕಾಶ್ಮೀರ್ ಫೈಲ್ಸ್’ ವೀಕ್ಷಣೆಯ ನಂತರ ನಾವು ದಿಗ್ಭ್ರಮೆಗೊಂಡಿದ್ದು, ವಿಚಲಿತರಾದೆವು. ಇದು, ಇಂತಹ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಬಂದ ಪ್ರಚಾರದ ಉದ್ದೇಶದ, ಅಸಭ್ಯ ಚಿತ್ರ’ ಎಂದು ಹೇಳಿದರು.

ADVERTISEMENT

ಗೋಲ್ಡನ್‌, ಪೀಕಾಕ್ಸ್ ಪ್ರಶಸ್ತಿಗೆ ಸೇರಿದಂತೆ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡುವ ಹೊಣೆ ತೀರ್ಪುಗಾರ ಮಂಡಳಿಯದಾಗಿತ್ತು. ‘ನಮಗಾದ ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಮುಕ್ತವಾಗಿದ್ದೇನೆ. ಕಲೆ, ಬದುಕಿಗೆ ಅಗತ್ಯವಾಗಿರುವ ವಿಮರ್ಶೆ ಸ್ವೀಕರಿಸುವುದು ಅಗತ್ಯ ಎಂದರು.ಒಪ್ಪಿಕೊಳ್ಳುವುದು ಅಗತ್ಯ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.