ADVERTISEMENT

‘ತಾಯಿ ಕಸ್ತೂರ್‌ ಗಾಂಧಿ’ ಸಿನಿಮಾ ಚಿತ್ರೀಕರಣ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 12:49 IST
Last Updated 28 ಅಕ್ಟೋಬರ್ 2021, 12:49 IST
ಹರಿಪ್ರಿಯಾ
ಹರಿಪ್ರಿಯಾ   

ಕಸ್ತೂರ್‌ಬಾ ಗಾಂಧಿಯವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿದ ಚಲನಚಿತ್ರ ‘ತಾಯಿ ಕಸ್ತೂರ್‌ಗಾಂಧಿ’ಯ ಚಿತ್ರೀಕರಣ ಇತ್ತೀಚೆಗೆ ಮುಗಿದಿದೆ.

ಪ್ರೊ.ಬರಗೂರು ರಾಮಚಂದ್ರಪ್ಪ ನಿರ್ದೇಶನದಲ್ಲಿ ಜನಮಿತ್ರ ಮೂವೀಸ್‌ ಬ್ಯಾನರ್‌ ಅಡಿ ಗೀತಾ ಅವರು ಈ ಚಿತ್ರ ನಿರ್ಮಿಸಿದ್ದಾರೆ.ಬರಗೂರು ಅವರೇ ಬರೆದ, ‘ಸುಧಾ’ದಲ್ಲಿ ಧಾರಾವಾಹಿಯಾಗಿ ಪ್ರಕಟವಾದ ‘ಕಸ್ತೂರ್‌ಬಾ ವರ್ಸಸ್‌ ಗಾಂಧಿ’ ಕಾದಂಬರಿಯನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗಿದೆ.ಕಸ್ತೂರ್‌ಬಾ ಪಾತ್ರದಲ್ಲಿ ಖ್ಯಾತ ನಟಿ ಹರಿಪ್ರಿಯಾ ಹಾಗೂ ಗಾಂಧಿ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್‌ ಅಭಿನಯಿಸಿದ್ದಾರೆ.

‘ವರ್ಸಸ್‌ ಎಂದರೆ ಕೇವಲ ವಿರೋಧ ಎಂದು ತಿಳಿಯಬೇಕಿಲ್ಲ.ಬದುಕಿನ ವಿವಿಧ ಘಟ್ಟಗಳಲ್ಲಿ ಎದುರಾದ ವಿಭಿನ್ನ ನೋಟಗಳ ಮತ್ತು ನಂಬಿಕೆಗಳ ರಚನಾತ್ಮಕ ಮುಖಾಮುಖಿಯಾಗಿ ಗಾಂಧಿ ಮತ್ತು ಕಸ್ತೂರ್‌ಬಾ ಅವರ ವ್ಯಕ್ತಿತ್ವವನ್ನು ವಿಶ್ಲೇಷಿಸುವುದು ಸಿನಿಮಾದ ಮುಖ್ಯ ಆಶಯವಾಗಿದೆ’ ಎನ್ನುತ್ತಾರೆ ಪ್ರೊ. ಬರಗೂರು.

ADVERTISEMENT

ಕಸ್ತೂರ್‌ಬಾ ತಾಯಿಯಾಗಿ ಮತ್ತು ಪತ್ನಿಯಾಗಿ ಎದುರಿಸಿದ ಬಿಕ್ಕಟ್ಟಗಳು, ಅಪರೂಪದ ದಾಂಪತ್ಯ ಮತ್ತು ಸಾಮಾಜಿಕ ಕಾಳಜಿಗಳು ಸಿನಿಮಾದ ಮುಖ್ಯ ಕಥಾವಸ್ತುಗಳಾಗಿವೆ ಎಂದು ಅವರು ಮಾಹಿತಿ ನೀಡುತ್ತಾರೆ.

ಬೆಂಗಳೂರಿನ ಅಭಿಮಾನ್‌ ಸ್ಟುಡಿಯೊದಲ್ಲಿ ಸಬರಮತಿ ಆಶ್ರಮದ ಸೆಟ್‌ ಹಾಗೂ ಕುಂಬಳಗೋಡು ಬಳಿಯ ಮುನಿಕುಮಾರ್ ಅವರ ಆಶ್ರಮಧಾಮದಲ್ಲಿ ಮಹಾರಾಷ್ಟ್ರದ ವಾರ್ದಾದ ಸೆಟ್‌ ಹಾಕಿ ಚಿತ್ರೀಕರಣ ನಡೆಸಲಾಗಿತ್ತು.

ಹಿರಿಯ ನಟ ಶ್ರೀನಾಥ್‌, ಸುಂದರರಾಜ್‌, ಪ್ರಮೀಳಾ ಜೋಷಾಯ್‌, ರೇಖಾ, ವೆಂಕಟರಾಜ್‌, ಸುಂದರರಾಜ್‌ ಅರಸು, ರಾಘವ್‌, ಆಕಾಂಕ್ಷಾ ಬರಗೂರು, ಸ್ಪಂದನ ಸುಭಾಷ್‌ ತಾರಾಗಣದಲ್ಲಿದ್ದಾರೆ. ಶಮಿತಾ ಮಲ್ನಾಡ್‌ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.