ದೊರೆ ಭಗವಾನ್ ನಿರ್ದೇಶನ ಮತ್ತು ವರನಟ ಡಾ.ರಾಜ್‌ಕುಮಾರ್ ನಟನೆಯ ‘ಕಸ್ತೂರಿ ನಿವಾಸ’ಚಿತ್ರವು ಸಿನಿರಸಿಕರ ಮನದಲ್ಲಿ ಇನ್ನೂ ಹಚ್ಚಹಸಿರಾಗಿಯೇ ಇದೆ. ಈಗ ಅದೇ ಹೆಸರಿನ ಹೊಸ ಧಾರಾವಾಹಿ ಮುಸ್ಸಂಜೆ ಮಹೇಶ್‌ನಿರ್ದೇಶನದಲ್ಲಿಉದಯ ಟಿ.ವಿಯಲ್ಲಿ ಶುರುವಾಗಿದೆ.
ಸೆ.9ರಿಂದಲೇ ಈ ಧಾರಾವಾಹಿ ಆರಂಭವಾಗಿದ್ದು, ಸೋಮವಾರದಿಂದ ಶನಿವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ.
ಮನೆತನ, ಸಂಪ್ರದಾಯ, ಸಂಸ್ಕೃತಿ ಎನ್ನುವ ಪಾರ್ವತಿ ಒಂದು ಕಡೆ, ಕಟ್ಟುಪಾಡುಗಳಲ್ಲಿ ನಂಬಿಕೆ ಇಲ್ಲದೆ, ಹಕ್ಕಿಯಂತೆ ಹಾರಾಡಬೇಕು ಎನ್ನುವಮೃದುಲಾ ಇನ್ನೊಂದುಕಡೆ. ವಿಭಿನ್ನ ಆಲೋಚನೆಗಳಿರುವ ಈ ಇಬ್ಬರನ್ನು ವಿಧಿ ಒಂದೇ ದಾರಿಯಲ್ಲಿ ನಡೆಯುವಂತೆ ಮಾಡಿದರೆ ಹೇಗಿರುತ್ತದೆ ಎನ್ನುವುದೇ ಈ ಧಾರಾವಾಹಿಯ ಕಥಾಹಂದರ.
ಹಳೆ ಕಾಲದ ಆಲೋಚನೆಗಳಿಗೆ ಆಧುನಿಕತೆಯ ಸ್ಪರ್ಶ ಕೊಟ್ಟುಕೊಂಡು ನಡೆಯುವುದರಲ್ಲಿ ತಪ್ಪೇನಿದೆ? ಎಂಬ ವಾದ ಮೃದಲಾಳದ್ದು.ಹೆಣ್ಣು ಅಡುಗೆ ಮಾಡಬೇಕು, ತಗ್ಗಿ ಬಗ್ಗಿ ನಡೆಯಲೇಬೇಕು, ಮೈ ಮುಚ್ಚುವಂತೆ ಉಡುಗೆತೊಡುಗೆ ಧರಿಸಬೇಕು ಎಂಬುದು ಪಾರ್ವತಿಯ ವಾದ. ಇವರ ಮಧ್ಯೆ ಅಮ್ಮನ ಮಾತನ್ನು ಮೀರಲು ಆಗದೆ, ಫ್ಯಾಶನ್ ಡಿಸೈನರ್ ಆಗುವ ಕನಸು ಕಾಣುವ ನಾಯಕ ರಾಘವ್ ತನ್ನ ಮನಸ್ಸಿನ ಮಾತನ್ನು ಧಿಕ್ಕರಿಸಲು ಆಗದೆ ಒದ್ದಾಡುತ್ತಾನೆ. ಈ ಕಥೆಯ ಎಳೆ ಇಟ್ಟುಕೊಂಡು ‘ಕಸ್ತೂರಿ ನಿವಾಸ’ದ ಮೂಲಕ ಕಿರುತೆರೆ ವೀಕ್ಷಕರನ್ನು ಸೆಳೆಯುವ ಪ್ರಯತ್ನ ನಿರ್ದೇಶಕ ಮುಸ್ಸಂಜೆ ಮಹೇಶ್ ಅವರದ್ದು.
ಕಲರ್ಸ್ ಸೂಪರ್ ಚಾನೆಲ್‌ನ ‘ರಾಜರಾಣಿ’ಯಲ್ಲಿ ಚಿಕ್ಕ ಪಾತ್ರ ಮತ್ತು ಕಸ್ತೂರಿ ಚಾನೆಲ್‌ನ ‘ನಾಗಮಂಡಲ’ ಧಾರಾವಾಹಿಯಲ್ಲಿ ಲೀಡ್ ರೋಲ್ ಮಾಡಿದ್ದನಟಿ ವರ್ಷಾ,ಮೃದಲಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕಿರುತೆರೆ ಮತ್ತು ಹಿರಿತೆರೆಯಲ್ಲೂ ಅಭಿನಯಿಸಿರುವನಟಿ ಆಶಾರಾಣಿ ಪಾರ್ವತಿಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
ನಾಯಕನಾಗಿ ದಿಲೀಪ್ ಶೆಟ್ಟಿ ಅಭಿನಯಿಸುತ್ತಿದ್ದು, ರಾಜಗೋಪಾಲ ಜೋಶಿ, ರುತು, ಶೀಲಶ್ರೀ, ಸಿತಾರಾ ಸೇರಿದಂತೆ ಹಲವುಪ್ರತಿಭಾವಂತ ಕಲಾವಿದರ ತಂಡವೇ ಈ ಧಾರಾವಾಹಿಯಲ್ಲಿದೆ.
ಈ ಧಾರಾವಾಹಿ ನಿರ್ಮಾಣದೇವಿ ಸ್ಟುಡಿಯೋಸ್, ಛಾಯಾಗ್ರಹಣ ಮಾಣಿ ಅವರದ್ದು.ಕಿರುತೆರೆ ನಟಿ ಜಯಶ್ರೀ ಈ ಧಾರಾವಾಹಿಯನ್ನು ವೀಕ್ಷಕರಿಗೆ ಅರ್ಪಿಸುತ್ತಿದ್ದಾರೆ.
**
ಇದು ನನಗೆ ಮೂರನೇ ಧಾರಾವಾಹಿ. ‘ಕಸ್ತೂರಿ ನಿವಾಸ’ದಲ್ಲಿ ನನ್ನದುಬಬ್ಲಿ ಹುಡುಗಿಯ ಕ್ಯಾರೆಕ್ಟರ್. ಅದೇ ಸಮಯಕ್ಕೆ ಯಾರಾದರೂ ತೊಂದರೆ ನೀಡಿದರೆ ಅಷ್ಟೇ ಖಡಕ್ಕಾಗಿ ಅವರಿಗೆ ಉತ್ತರಿಸುವ ಜೋರುಗಾತಿ. ಹಾಗೆಯೇ ಅಪ್ಪನಿಗೂಮುದ್ದಿನ ಮಗಳು. ವೀಕ್ಷಕರ ಮನಸನ್ನೂ ಗೆಲ್ಲುವ ನಿರೀಕ್ಷೆಯಲ್ಲಿದ್ದೇನೆ.
–ವರ್ಷಾ, ನಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.