ಮುಂಬೈ: ಬಾಲಿವುಡ್ ತಾರೆಗಳಾದ ಕತ್ರಿನಾ ಕೈಫ್(38) ಮತ್ತು ವಿಕ್ಕಿ ಕೌಶಲ್(33) ಮುಂದಿನ ವಾರ ರಾಜಸ್ಥಾನದಲ್ಲಿ ವಿವಾಹವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ 7 ರಿಂದ 9ರವರೆಗೆರಾಜಸ್ಥಾನದಲ್ಲಿ ವಿವಾಹ, ಸಂಗೀತ ಹಾಗೂ ಮೆಹಂದಿ ಕಾರ್ಯಕ್ರಮಗಳು ನಡೆಯಲಿವೆ.
‘ಈ ಸಮಾರಂಭದಲ್ಲಿ ಹತ್ತಿರದ ಸಂಬಂಧಿಗಳು, ಕುಟುಂಬದ ಆಪ್ತರು ಮತ್ತು ಸ್ನೇಹಿತರು ಮಾತ್ರ ಹಾಜರಿರುತ್ತಾರೆ. ಆ ನಂತರದ ಕೆಲ ದಿನಗಳಲ್ಲಿ ಬಾಲಿವುಡ್‌ನ ವೃತ್ತಿ ಬಾಂಧವರಿಗಾಗಿ ಸಮಾರಂಭವನ್ನು ಏರ್ಪಡಿಸಲಾಗುತ್ತದೆ‘ ಎಂದು ತಿಳಿದುಬಂದಿದೆ.
ವಿವಾಹ ಕಾರ್ಯಕ್ರಮವನ್ನು ಅತ್ಯಂತ ಖಾಸಗಿ ಸಮಾರಂಭವಾಗಿ ನಡೆಸಲು ವಿಕ್ಕಿ-ಕತ್ರೀನಾ ಜೋಡಿ ಬಯಸಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.