ತಿರುವನಂತಪುರ: ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಕಾರ್ಯಕ್ರಮ ಆಯೋಜನೆಗೆ ಕೇರಳದ ವಿಶ್ವವಿದ್ಯಾಲಯ ತಡೆಯೊಡ್ಡಿದೆ.
ಟೆಕ್ ಫೆಸ್ಟ್‌ನ ಭಾಗವಾಗಿ ವಿದ್ಯಾರ್ಥಿ ಒಕ್ಕೂಟವು ಜುಲೈ 5ರಂದು ಸನ್ನಿ ಲಿಯೋನ್ ಕಾರ್ಯಕ್ರಮ ಆಯೋಜಿಸಿತ್ತು.
‘ವಿಶ್ವವಿದ್ಯಾಲಯದ ಆವರಣದೊಳಗೆ ಹೊರಗಿನ ಬ್ಯಾಂಡ್‌ಗಳಿಗೆ ಅವಕಾಶ ನೀಡದಂತೆ ಉನ್ನತ ಶಿಕ್ಷಣ ಸಚಿವಾಲಯದ ನಿರ್ದೇಶನವಿದ್ದು, ಅದನ್ನು ಆಧರಿಸಿ ಅನುಮತಿ ರದ್ದುಪಡಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಮೋಹನನ್ ಕುನ್ನುಮ್ಮಾಳ್ ಹೇಳಿದ್ದಾರೆ.
‘ಸಿಯುಎಸ್‌ಎಟಿ ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಕೆಲ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಕ್ಯಾಂಪಸ್ ಒಳಗೆ ಹೊರಗಿನ ಬ್ಯಾಂಡ್ ಆಯೋಜಿಸದಂತೆ ಸರ್ಕಾರದ ಸ್ಪಷ್ಟ ಸೂಚನೆಯೇ ಇದೆ’ ಎಂದು ಹೇಳಿದ ಅವರು, ಪೋಸ್ಟರ್ ಮೂಲಕ ಕಾರ್ಯಕ್ರಮದ ಮಾಹಿತಿ ಲಭ್ಯವಾಯಿತು ಎಂದು ತಿಳಿಸಿದ್ದಾರೆ.
‘ಕ್ಯಾಂಪಸ್ ಒಳಗೆ ಆಯೋಜಿಸಲಾಗುವ ಕಾರ್ಯಕ್ರಮಗಳಿಗೆ ಹೊರಗಿನಿಂದ ಹಣ ಸಂಗ್ರಹ ಮಾಡದಂತೆಯೂ ನಿರ್ದೇಶನವಿದೆ. ನಮ್ಮ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ 300 ವಿದ್ಯಾರ್ಥಿಗಳಿದ್ದಾರೆ. ಬಾಲಿವುಡ್ ನಟಿಯನ್ನು ಕರೆಯಿಸುವುದಾದರೆ, ಅದಕ್ಕೆ ದೊಡ್ಡ ಮೊತ್ತದ ಹಣದ ಅಗತ್ಯ. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.