ADVERTISEMENT

ನಿರ್ಮಾಪಕರ ಡಾರ್ಲಿಂಗ್ ಅಕ್ಷಯ್: ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯುತ್ತಿದೆ ‘ಕೇಸರಿ’

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 11:34 IST
Last Updated 26 ಮಾರ್ಚ್ 2019, 11:34 IST
ಕೇಸರಿ
ಕೇಸರಿ   

ಬಾಲಿವುಡ್‌ ನಟ ಅಕ್ಷಯ್ ಕುಮಾರ್‌ ನಿರ್ಮಾಪಕರ ಪಾಲಿನ ಅಕ್ಷಯಪಾತ್ರೆ ಎಂದು ಮತ್ತೊಮ್ಮೆ ಸಾಬೀತಾಗಿದೆ. ಚುನಾವಣೆಗೂ ಮುನ್ನ ಬಿಡುಗಡೆಯಾಗಿರುವ ‘ಕೇಸರಿ’ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯುತ್ತಿದೆ.

ಗುರುವಾರ ಬಿಡುಗಡೆಯಾದ ಮೊದಲ ದಿನವೇ ₹21.06ಕೋಟಿ ಬಾಚಿಕೊಂಡಿದ್ದ ಕೇಸರಿ ಐದು ದಿನಗಳ ಗಳಿಕೆಬರೋಬ್ಬರಿ ₹78.08ಕೋಟಿ ತಲುಪಿದೆ.

ಅಮೀರ್‌ ಖಾನ್‌, ಶಾರೂಕ್‌ ಖಾನ್‌ ಮತ್ತು ಸಲ್ಮಾನ್‌ ಖಾನ್‌ ಬಿಟ್ಟರೆಅಕ್ಷಯ್ ಕುಮಾರ್‌ ಚಿತ್ರಗಳು ಬಿಡುಗಡೆಯಾದ ಮೊದಲ ಎರಡು ಮೂರು ದಿನಗಳಲ್ಲಿ ಕೋಟಿ ಕೋಟಿ ಹಣವನ್ನು ಕೊಳ್ಳೆ ಹೊಡೆಯುತ್ತವೆ. ಇದರಿಂದಾಗಿಯೇ ಅಕ್ಷಯ್‌ ಕುಮಾರ್, ನಿರ್ಮಾಪಕರ ಡಾರ್ಲಿಂಗ್‌ ಎಂದು ಹೆಸರಾಗಿದ್ದಾರೆ.

ADVERTISEMENT

ಐಪಿಎಲ್‌ ಕ್ರಿಕೆಟ್‌ ಮ್ಯಾಚ್‌ಗಳು ಶುರುವಾದರೂ ಥಿಯೇಟರ್‌ಗಳಿಗೆ ಬರುತ್ತಿರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.