ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್–ಚಾಪ್ಟರ್ 2‘ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆಯತ್ತ ಮುನ್ನುಗುತ್ತಿದೆ.
ಅದರಲ್ಲೂ ಚಿತ್ರದ ಒಟ್ಟಾರೆ ಗಳಿಕೆ ₹1,000 ಕೋಟಿಗೂ ಹೆಚ್ಚಾಗಿದ್ದು, ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ಎಂದೇ ಬಣ್ಣಿಸಲಾಗುತ್ತದೆ.
ಅದರ ಜತೆಗೆ, ಹಿಂದಿಯಲ್ಲಿ ಬಾಲಿವುಡ್ ಚಿತ್ರಗಳ ಪೈಪೋಟಿ ಎದುರು, ಕೆಜಿಎಫ್ ಚಾಪ್ಟರ್ 2 ಚಿತ್ರ ₹300 ಕೋಟಿಗೂ ಅಧಿಕ ಗಳಿಕೆ ಕಂಡಿದೆ.
ಈ ಪೈಕಿ, ಹೆಮ್ಮೆ ಪಡುವ ಸಂಗತಿಯೇನೆಂದರೆ, ಕನ್ನಡ ಚಿತ್ರವೊಂದು ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ ₹100 ಕೋಟಿ ಗಳಿಸಿದೆ.
ಈ ಕುರಿತು ತಮಿಳುನಾಡಿನ ಬಾಕ್ಸ್ ಆಫೀಸ್ ವಾಣಿಜ್ಯ ವಿಶ್ಲೇಷಕ ಮನೋಬಾಲ ವಿಜಯಬಾಲನ್ ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ಕೆಜಿಎಫ್–ಚಾಪ್ಟರ್ 2 ಏಪ್ರಿಲ್ 14ರಂದು ಬಿಡುಗಡೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.