ADVERTISEMENT

ನಟಿ ಖುಷ್ಬೂ ಸುಂದರ್‌ ಅಧಿಕೃತ ಟ್ವಿಟರ್‌ ಖಾತೆ ಹ್ಯಾಕ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜುಲೈ 2021, 7:42 IST
Last Updated 20 ಜುಲೈ 2021, 7:42 IST
ಖುಷ್ಬೂ
ಖುಷ್ಬೂ   

ಚೆನ್ನೈ: ಬಿಜೆಪಿ ನಾಯಕಿ ಹಾಗೂ ನಟಿಖುಷ್ಬೂ ಸುಂದರ್‌ ಅವರ ಅಧಿಕೃತ ಟ್ವಿಟರ್‌ ಖಾತೆಯನ್ನು ಸೋಮವಾರ ಹ್ಯಾಕ್‌ ಮಾಡಲಾಗಿದೆ.

ಖುಷ್ಬೂ ಅವರ ಟ್ವಿಟರ್‌ ಖಾತೆ ಹ್ಯಾಕ್‌ ಆಗಿರುವುದು ಇದು ಎರಡನೇ ಸಲ. 2020ರ ಏಪ್ರಿಲ್‌ನಲ್ಲಿಖುಷ್ಬೂ ಅವರ ಟ್ವಿಟರ್‌ ಖಾತೆಯನ್ನು ಹ್ಯಾಕ್‌ ಮಾಡಲಾಗಿತ್ತು.

ಈ ಬಾರಿ ಟ್ವಿಟರ್‌ ಖಾತೆಯ ಹೆಸರನ್ನು ಬ್ರಯಾನ್‌ ಎಂದು ಬದಲಿಸಿದ್ದಾರೆ. ಹಾಗೇ ಕವರ್‌ ಚಿತ್ರವನ್ನು ಬದಲಾಯಿಸಿದ್ದು, ಅವರ ಎಲ್ಲಾ ಟ್ವೀಟ್‌ಗಳನ್ನು ಅಳಿಸಲಾಗಿದೆ.

ADVERTISEMENT

ಈ ಬಗ್ಗೆಖುಷ್ಬೂ ದೂರು ದಾಖಲು ಮಾಡಿದ್ದಾರೆ. ಮುಂದಿನ 48 ಗಂಟೆಗಳಲ್ಲಿಖುಷ್ಬೂ ಅವರ ಟ್ವಿಟರ್‌ ಖಾತೆಯನ್ನು ಮರು ಸ್ಥಾಪಿಸಲಾಗುವುದು ಎಂದು ಟ್ವಿಟರ್‌ ತಿಳಿಸಿದೆ ಎಂದುಖುಷ್ಬೂ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.