ಬೆಂಗಳೂರು: ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಮತ್ತು ನಟಿ ದಿ. ಶ್ರೀದೇವಿ ಅವರ ಪುತ್ರಿ ಖುಷಿ ಕಪೂರ್, ಬಿಟೌನ್‌ನ ಮುಂದಿನ ಪೀಳಿಗೆಯವರಲ್ಲಿ ಮುಂಚೂಣಿಯಲ್ಲಿಕಾಣಿಸಿಕೊಳ್ಳುತ್ತಾರೆ.
ಖುಷಿ ಕಪೂರ್ ಅವರ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಬಾಲಿವುಡ್ ಮಂದಿ ಫಿದಾ ಆಗಿದ್ದಾರೆ..
ಅಭಿಮಾನಿಗಳು ಕೂಡ ಖುಷಿ ಹೊಸ ಫೋಟೊ ಪೋಸ್ಟ್ ಮಾಡಿದಾಗ ಸಂಭ್ರಮಿಸುತ್ತಾರೆ.
ಖುಷಿ ಅವರು ಕಂದು ಬಣ್ಣದ, ಮೈಗಂಟಿರುವ ಉಡುಗೆ ಧರಿಸಿ ಇನ್‌ಸ್ಟಾಗ್ರಾಂನಲ್ಲಿ ಸೆಲ್ಫಿ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಈ ಫೋಟೊ ಕಂಡು, ಅವರ ಗೆಳತಿ ಸುಹಾನಾ ಖಾನ್, ಹೃದಯ ಮತ್ತು ಪ್ರೀತಿಯ ಎಮೋಜಿ ಬಳಸಿ ಕಾಮೆಂಟ್ ಮಾಡಿದ್ದಾರೆ.
ಅಲ್ಲದೆ, ಶಾನಾಯ ಕಪೂರ್, ಮಹೀ ಕಪೂರ್ ಸಹಿತ ಹಲವರು ಕಾಮೆಂಟ್ ಮಾಡಿದ್ದು, ಖುಷಿ ಈ ಫೋಟೊದಲ್ಲಿ ಗೊಂಬೆಯಂತೆ ಕಾಣಿಸುತ್ತಿದ್ದಾರೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.