ನಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಜೋಡಿಯ ಪ್ರೇಮ ಸಂಬಂಧ ಮುರಿದು ಬಿದ್ದಿದೆ ಎಂಬ ವದಂತಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ. ಆದರೆ, ಅವನ್ನೆಲ್ಲ ಅಲ್ಲಗಳೆಯುವಂತೆಕಿಯಾರಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
'ಸಿದ್ಧಾರ್ಥ್ ಹಾಗೂ ಕಿಯಾರಾ ಕೆಲವು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ. ಆದರೆ ಇದೀಗ ತಮ್ಮ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದ್ದಾರೆ' ಎಂಬ ಗಾಳಿಸುದ್ದಿಗಳು ಪ್ರಸಾರವಾಗಿದ್ದವು. ಈ ನಡುವೆ ಕಿಯಾರಾ, ಗೆಳೆಯ ಸಿದ್ಧಾರ್ಥ್ ಇರುವ ಪೋಸ್ಟರ್‌ವೊಂದನ್ನು 'ಹೃದಯ' ಮತ್ತು 'ನಮಸ್ತೆ' ಇಮೋಜಿಯೊಂದಿಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.
ಪೋಸ್ಟರ್‌ನಲ್ಲಿ ಏನಿದೆ?
'ಧರ್ಮ ಪ್ರೊಡಕ್ಷನ್ಸ್' ಅಡಿ ನಿರ್ಮಾಣವಾಗಿರುವ ಹಾಗೂ 2021ರ ಆಗಸ್ಟ್‌ನಲ್ಲಿ ತೆರೆಕಂಡ 'ಶೇರ್‌ಶಾ' ಚಿತ್ರದಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ಜೊತೆಯಾಗಿ ನಟಿಸಿದ್ದಾರೆ.
ಈ ಚಿತ್ರಕ್ಕೆ ಹಿಂದಿಯ ಅತ್ಯುತ್ತಮ ವೆಬ್ ಸಿನಿಮಾ 'ಒಟಿಟಿ ಪ್ರಶಸ್ತಿ' ಲಭಿಸಿದೆ. ಕಿಯಾರಾ ಮತ್ತು ಸಿದ್ಧಾರ್ಥ್ ಅವರಿಗೂ ಅತ್ಯುತ್ತಮ ನಟ, ನಟಿ ಪ್ರಶಸ್ತಿ ಲಭಿಸಿದೆ. ಈ ಕುರಿತ ಚಿತ್ರವೊಂದನ್ನು 'ಧರ್ಮ ಮೂವೀಸ್' ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. ಕಿಯಾರಾ ಹಂಚಿಕೊಂಡಿರುವುದೂ ಅದೇ ಚಿತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.