ಮುಂಬೈ: ನವ ವಿವಾಹಿತರಾದ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ಕಿಯಾರಾ ಅಡ್ವಾಣಿ ತಮ್ಮ ಮದುವೆಗೆ ಆಗಮಿಸಿದ್ದ ಅತಿಥಿಗಳಿಗಾಗಿ ವಿಶೇಷ ಪತ್ರ ಬರೆದಿದ್ದಾರೆ.
ಇದೀಗ ಈ ಪತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಪತ್ರದಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ, ‘ನಮ್ಮ ಮದುವೆಯ ದಿನ ಒಟ್ಟಾಗಿ ಸಂಭ್ರಮದಿಂದ ಕಾಲ ಕಳೆದೆವು. ಎಲ್ಲರಿಗೂ ಧನ್ಯವಾದಗಳು. ನಮ್ಮ ಜೀವನದಲ್ಲಿ ಇಂತಹ ಅದ್ಭುತ ಕುಟುಂಬ ಮತ್ತು ಸ್ನೇಹಿತರನ್ನು ಪಡೆಯಲು ನಾವು ತುಂಬಾ ಅದೃಷ್ಟ ಮಾಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಜೊತೆಗೆ, ದೆಹಲಿಯಲ್ಲಿ ಇಂದು ಸಂಜೆ ನಡೆಯಲಿರುವ ಆರತಕ್ಷತೆಗೆ ಬಂಧುಗಳು ಮತ್ತು ಸ್ನೇಹಿತರಿಗೆ ಆಹ್ವಾನ ನೀಡಿದ್ದಾರೆ.
"ದಯವಿಟ್ಟು ಇಂದು ಸಂಜೆ ನಮ್ಮೊಂದಿಗೆ ಸಂತಸದಿಂದ ಕಾಲ ಕಳೆಯಿರಿ. ಪ್ರೀತಿಯಿಂದ ಕಿಯಾರಾ ಮತ್ತು ಸಿದ್" ಎಂದು ಉಲ್ಲೇಖಿಸಿದ್ದಾರೆ.
ದಂಪತಿಯ ಹೆಸರಿನ ಮೊದಲ ಅಕ್ಷರಗಳಾದ ಎಸ್ ಮತ್ತು ಕೆ ಅನ್ನು ಕೆತ್ತಿರುವ ನಾಣ್ಯವನ್ನು ಪತ್ರದ ಜೊತೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.