ನಟ ಕಿಚ್ಚ ಸುದೀಪ್ ಫ್ಯಾಮಿಲಿ ಅಲ್ಬಂನಿಂದ ಅಪರೂಪದ ಹಳೆಯಬ್ಲ್ಯಾಕ್ ಆಂಡ್ ವೈಟ್ ಚಿತ್ರವೊಂದನ್ನು ಹೆಕ್ಕಿ ತೆಗೆದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತಾಯಿ ಮತ್ತು ಸಹೋದರಿಯರ ಜತೆಗಿರುವ ಹಳೆಯ ಫೋಟೊದೊಂದಿಗೆ ಕಿಚ್ಚ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಕಾಲಿನ ಮೇಲೆ ಮತ್ತೊಂದು ಕಾಲು ಹಾಕಿ ಸ್ಟೂಲ್ ಮೇಲೆ ಸ್ಟೈಲಿಶ್ ಆಗಿ ಕುಳಿತಿರುವ ಸುದೀಪ್ ಹಿಂದೆ ಅವರ ತಾಯಿ ಮತ್ತು ಅಕ್ಕಂದಿರು ನಿಂತಿದ್ದಾರೆ.
‘ಇಂದಿನ ಸೆಲ್ಫಿ ದಿನಮಾನಗಳಲ್ಲಿ ಇಂಥಫ್ಯಾಮಿಲಿ ಫೋಟೊಗಳುನೋಡಲು ಸಿಗುವುದು ಅಪರೂಪ. ಹೌದು! ಆ ಹಳೆಯ ದಿನಗಳನ್ನು ತುಂಬಾ ‘ಮಿಸ್’ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸುದೀಪ್ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.
ಅಂದಿನ ಕಾಲದಲ್ಲಿ ಟ್ರೆಂಡ್ ಆಗಿದ್ದ ಬೆಲ್ ಬಾಟಮ್ ಪ್ಯಾಂಟ್, ಅಂಗೈ ಅಗಲದ ಬೆಲ್ಟ್, ದೊಡ್ಡ ಕಾಲರ್ ಶರ್ಟ್ ಮತ್ತು ಹಿಪ್ಪಿ ಕಟ್ನಲ್ಲಿರುವ ಸುದೀಪ್ ಸ್ಟೈಲ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಫೋಟೊ ಯಾವಾಗ ತೆಗೆಸಿದ್ದು ಎಂದು ಸುದೀಪ್ ಹೇಳಿಲ್ಲವಾದರೂ, ಬಹುಶಃ 70ರ ದಶಕದ ಚಿತ್ರವಿರಬಹುದು ಎಂದು ಊಹಿಸಬಹುದು. ಫೋಟೊ ಪೋಸ್ಟ್ ಮಾಡಿದ 22 ಗಂಟೆಯಲ್ಲಿ 1,586 ಮಂದಿ ಕಮೆಂಟ್ ಮಾಡಿದ್ದು, 1,46,982 ಜನರು ಲೈಕ್ ಮಾಡಿದ್ದಾರೆ.
ಸುದೀಪ್ ನಟಿಸಿರುವ ‘ಕೋಟಿಗೊಬ್ಬ–3’ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದು, ಅಭಿಮಾನಿಗಳು ಕುತೂಹಲದಿಂದಕಾಯುತ್ತಿದ್ದಾರೆ. ಶಿವ ಕಾರ್ತಿಕ್ ನಿರ್ದೇಶನದ ಆ್ಯಕ್ಷನ್ ಚಿತ್ರದಲ್ಲಿ ಮಡೋನಾ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಹಿಂದಿ ನಟ ಅಫ್ತಾಬ್ ಶಿವದಾಸಾನಿ, ನವಾಬ್ ಶಾ ಮತ್ತು ಪಿ. ರವಿಶಂಕರ್ ಕಿಚ್ಚನ ಜತೆ ತೆರೆ ಹಂಚಿಕೊಂಡಿದ್ದಾರೆ. 2016ರಲ್ಲಿ ಬಿಡುಗಡೆಯಾದ ಸುದೀಪ್ ಅಭಿನಯದ ‘ಕೋಟಿಗೊಬ್ಬ–2’ ಚಿತ್ರದ ಸಿಕ್ವೆಲ್ ಇದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.