ADVERTISEMENT

‘ಮನರೂಪ’ಕ್ಕೆ ಔಟ್ ಆಫ್ ದಿ ಕ್ಯಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 9:01 IST
Last Updated 3 ನವೆಂಬರ್ 2020, 9:01 IST
ಮನರೂಪ ಚಿತ್ರದ ದ್ರಶ್ಯ
ಮನರೂಪ ಚಿತ್ರದ ದ್ರಶ್ಯ   

ಮನುಷ್ಯನ ಅಂತರಂಗದ ನೈತಿಕ ಹಾಗೂ ಅನೈತಿಕ ವಿಚಾರಗಳನ್ನು ಕಾಡಿನ ಮಧ್ಯದಲ್ಲಿ ಹೇಳುವ ಪ್ರಯತ್ನ ಮಾಡಿರುವ ಮನುರೂಪ ಚಿತ್ರವು ದೇಶ–ವಿದೇಶಗಳ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಔಟ್ ಆಫ್ ದಿ ಕ್ಯಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಉತ್ತಮ ಥ್ರಿಲ್ಲರ್ ಸಿನಿಮಾ ಪ್ರಶಸ್ತಿ’ ಗಳಿಸಿದೆ ಚಿತ್ರತಂಡ. ಈ ಮೂಲಕ ಮನರೂಪ ಕಳೆದ 6 ತಿಂಗಳಿನಲ್ಲಿ ಒಟ್ಟು 10 ಪ್ರಶಸ್ತಿಗಳನ್ನು ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪಡೆದುಕೊಂಡಂತಾಗಿದೆ.

‘ಆಯೋಜಕರು ತಿಳಿಸಿರುವಂತೆ ಜಗತ್ತಿನ ಬೇರೆ ಬೇರೆ ದೇಶಗಳ, ಸಂಸ್ಕೃತಿಯ 5 ಸಾವಿರ ಚಿತ್ರಗಳು ಔಟ್ ಆಫ್ ದಿ ಕ್ಯಾನ್ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದವು. ಅವುಗಳಲ್ಲಿ 110 ಚಿತ್ರಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಅವುಗಳಲ್ಲಿ ಕನ್ನಡದ ಮನರೂಪ ಚಿತ್ರ ಕೂಡಾ ಒಂದು. ಮನರೂಪಕ್ಕೆ ಉತ್ತಮ ಥ್ರಿಲ್ಲರ್ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ’ ಎಂದಿದ್ದಾರೆ ನಿರ್ದೇಶಕ ಮತ್ತು ನಿರ್ಮಾಪಕ ಕಿರಣ್ ಹೆಗಡೆ.

ADVERTISEMENT

ಮನರೂಪದಲ್ಲಿ ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಯಶ್ ರಾಮ್ ಹಾಗೂ ಶಿವಪ್ರಸಾದ, ಬಿ. ಸುರೇಶ್‌, ಅಮೋಘ ಸಿದ್ಧಾರ್ಥ್, ಗಜ ನಿನಾಸಂ ಹಾಗೂ ಪ್ರಜ್ವಲ್ ಗೌಡ ಮುಂತಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.