ADVERTISEMENT

ಕೆಎಲ್ ರಾಹುಲ್ ಆಥಿಯಾ ಅದ್ಧೂರಿ ವಿವಾಹ: ಅಧಿಕೃತವಾಗಿ ಮಾವನಾದೆ ಎಂದ ಸುನೀಲ್ ಶೆಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2023, 7:19 IST
Last Updated 24 ಜನವರಿ 2023, 7:19 IST
ಕೆಎಲ್ ರಾಹುಲ್ ಆಥಿಯಾ
ಕೆಎಲ್ ರಾಹುಲ್ ಆಥಿಯಾ    

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆ.ಎಲ್ ರಾಹುಲ್ ಅವರು ತಮ್ಮ ಗೆಳತಿ ಆಥಿಯಾ ಶೆಟ್ಟಿ ಅವರೊಂದಿಗೆ ಖಂಡಾಲಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬಾಲಿವುಡ್ ನಟ ಹಾಗೂ ಆಥಿಯಾ ತಂದೆ ಸುನಿಲ್ ಶೆಟ್ಟಿ ಅವರ ಜಹಾನ್ ಫಾರ್ಮ್‌ಹೌಸ್‌ನಲ್ಲಿ ರಾಹುಲ್, ಅಥಿಯಾ ಅವರನ್ನು ವರಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸುನೀಲ್, ನನಗೆ ತುಂಬಾ ಖುಷಿಯಾಗಿದೆ. ಇದೀಗ ನಾನು ಅಧಿಕೃತವಾಗಿ ಮಾವನಾದೆ ಎಂದು ಹೇಳಿದ್ದಾರೆ.

ಐಪಿಎಲ್ ಟೂರ್ನಿ ಮುಗಿದ ಬಳಿಕ ಮುಂಬೈನಲ್ಲಿ ಅದ್ಧೂರಿಯಾಗಿ ಆರತಕ್ಷತೆಯನ್ನು ನೆರವೇರಿಸಲಾಗುವುದು ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.

ADVERTISEMENT

ಈ ಜೋಡಿ ನಾಲ್ಕು ವರ್ಷಗಳಿಂದ ಡೇಟಿಂಗ್‌ ನಡೆಸಿತ್ತು. ಅಥಿಯಾ ಶೆಟ್ಟಿ ಜೊತೆಗಿನ ಚಿತ್ರವೊಂದನ್ನು ಹೊಸ ವರ್ಷದ ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದ ರಾಹುಲ್‌, ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಘೋಷಿಸಿದ್ದರು.

ಇವರಿಬ್ಬರ ವಿವಾಹಪೂರ್ವ ತಯಾರಿ ಜನವರಿ 21ರಿಂದಲೂ ನಡೆಯುತ್ತಿವೆ. 22ರಂದು ಮಹೆಂದಿ ಹಾಗೂ ಸಂಗೀತಾ ಕಾರ್ಯಕ್ರಮಗಳು ಜರುಗಿವೆ. ಆರಕ್ಷತೆಯ ಸಮಾರಂಭವನ್ನು 2023ರ ಐಪಿಎಲ್ ನಂತರ ದೊಡ್ದ ಮಟ್ಟದಲ್ಲಿ ನಡೆಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬಾಲಿವುಡ್ ಖ್ಯಾತ ನಟ ನಟಿಯರು ಸೇರಿದಂತೆ ಭಾರತೀಯ ಆಟಗಾರರಾದ ಎಂ.ಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಕುಟುಂಬದೊಂದಿಗೆ ಪಾಲ್ಗೊಂಡಿದ್ದರು. ಬಾಲಿವುಡ್‌ನ ಪ್ರಮುಖ ಸೆಲೆಬ್ರಿಟಿ ಸ್ಟೈಲಿಸ್ಟ್ ಆ್ಯಮಿ ಪಟೇಲ್, ಅಥಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್‌ರವರನ್ನು ಸಜ್ಜುಗೊಳಿಸಿದ್ದರು


ಅಥಿಯಾ ಶೆಟ್ಟಿ ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಮಗಳು. ಅಥಿಯಾ ಮಾಡೆಲ್, ನಟಿ ಹಾಗೂ ಫ್ಯಾಷನ್ ಡಿಸೈನರ್‌ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.