ಆಸ್ಕರ್‌ಗೆ ಪ್ರವೇಶ ಪಡೆದ ಏಕೈಕ ಭಾರತೀಯ ಚಿತ್ರ ‘ಲಾಸ್ಟ್ ಫಿಲಂ ಶೋ’ದೇಶದ 95 ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದ್ದು, ₹95ಕ್ಕೆ ಪ್ರದರ್ಶನಗೊಳ್ಳಲಿದೆ. ಗುಜರಾತ್ ಭಾಷೆಯ ಸಿನಿಮಾ 95ನೇ ಆಸ್ಕರ್ ಪ್ರಶಸ್ತಿಗೆ ಆಯ್ಕೆಗೊಂಡಿದೆ.
ಗುರುವಾರ ಚಿತ್ರ ತೆರೆಗೆ ಬರುತ್ತಿದೆ. 95ನೇ ಆಸ್ಕರ್‌ಗೆ ಪ್ರವೇಶ ಪಡೆದಿರುವುದರಿಂದ ₹95 ನಿಗದಿಪಡಿಸಲಾಗಿದೆ. ಸಾಕಷ್ಟು ಜನ ಸಿನಿಮಾ ಬಗ್ಗೆ ಕೇಳುತ್ತಿದ್ದರು. ಹೀಗಾಗಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ಪಾನ್ ನಳಿನ್ ಹೇಳಿದ್ದಾರೆ.
ಸಿನಿಮಾ ಕುರಿತು ಪ್ರೀತಿ ಹೊಂದಿರುವ ಹಳ್ಳಿ ಹುಡುಗನ ಕಥೆಯಿದು. 9 ವರ್ಷದ ಗುಜರಾತ್‌ನ ಗ್ರಾಮೀಣ ಭಾಗದ ಬಾಲಕನ ಕಥೆಯನ್ನು ಚಿತ್ರ ಹೇಳುತ್ತದೆ. ರಾಯ್ ಕಪೂರ್ ಫಿಲಂಸ್ ಚಿತ್ರದ ನಿರ್ಮಾಪಕರು. ವಿದೇಶದ ಆಯ್ದ ಚಿತ್ರಮಂದಿರಗಳಲ್ಲಿಯೂ ಚಿತ್ರ ಬಿಡುಗಡೆಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.