ನವದೆಹಲಿ: ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಮಾತೃಭಾಷೆ ಮರಾಠಿ, ಆದರೆ 30ಕ್ಕೂ ಹೆಚ್ಚು ಭಾಷೆಗಳಲ್ಲಿ ಅವರ ಗಾನ ಮಾಧುರ್ಯ ವ್ಯಾಪಿಸಿದೆ. ಅವರು ಕೆಲವು ವರ್ಷಗಳ ಹಿಂದೆ ಮೊಟ್ಟ ಮೊದಲ ಬಾರಿಗೆ ಗುಜರಾತಿಯಲ್ಲಿ ಪತ್ರ ಬರೆದಿದ್ದರು. ಅದು ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರಿಗೆ ಬರೆದ ಅಭಿನಂದನಾ ಪತ್ರ.
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿದು, ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾದ ಸಂದರ್ಭದಲ್ಲಿ ಲತಾ ದೀದಿ ಹೀರಾಬೆನ್ ಅವರಿಗೆ ಪತ್ರ ಬರೆದಿದ್ದರು.
ಗುಜರಾತಿಯಲ್ಲಿ ಬರೆದ ಪತ್ರದಲ್ಲಿ: 'ಎರಡನೇ ಅವಧಿಗೆ ಪ್ರಧಾನಿಯಾದ ನಿಮ್ಮ ಮಗ, ನನ್ನ ತಮ್ಮನಿಗೆ ಅಭಿನಂದನೆಗಳು. ಗುಜರಾತಿಯಲ್ಲಿ ಇದೇ ಮೊದಲ ಬಾರಿಗೆ ಬರೆಯುತ್ತಿದ್ದೇನೆ, ಏನಾದರೂ ತಪ್ಪುಗಳಿದ್ದರೆ ಕ್ಷಮಿಸಿಬಿಡಿ' ಎಂದು ಬರೆದಿದ್ದರು.
ಇದನ್ನೂ ಓದಿ: ಗಾನವೆನುವ ಗಂಧ ಚೆಲ್ಲಿ... ಲತಾ ಮಂಗೇಶ್ಕರ್ ನೆನಪು
ಪತ್ರದಲ್ಲಿ ಅವರು ನರೇಂದ್ರ ಮೋದಿ ಅವರನ್ನು ತಮ್ಮನೆಂದು ಹಾಗೂ ಹೀರಾಬೆನ್ ಅವರನ್ನು ತಾಯಿ ಎಂದು ಕರೆದಿದ್ದರು.
ಕೋವಿಡ್–19 ಸಂಬಂಧಿತ ಕಾರಣಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಲತಾ ಮಂಗೇಶ್ಕರ್ ಅವರು ಭಾನುವಾರ ನಿಧನರಾದರು. ಅವರು 70 ವರ್ಷಗಳ ಗಾಯನ ಯಾನದಲ್ಲಿ 30 ಸಾವಿರಕ್ಕೂ ಹಾಡುಗಳನ್ನು ಹಾಡಿದ್ದಾರೆ.
ಇದನ್ನೂ ಓದಿ: ಗಂಧರ್ವ ಸಂಪುಟದ ಅಂತ್ಯ.. ಲತಾ ಮಂಗೇಶ್ಕರ್ ನುಡಿನಮನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.