ಬೆಂಗಳೂರು: ದಕ್ಷಿಣ ಭಾರತದ ಪ್ರಮುಖಸಿನಿಮಾ ಪ್ರೊಡಕ್ಷನ್ ಹೌಸ್ ಎಂದು ಖ್ಯಾತಿ ಇರುವ ಲೈಕಾ ಪ್ರೊಡಕ್ಸನ್ ಕಂಪನಿ ಇಂದು ಎರಡು ದೊಡ್ಡ ಸಿನಿಮಾಗಳನ್ನು ಘೋಷಣೆ ಮಾಡಿದೆ.
ಹೌದು, ರಜನಿಕಾಂತ್ ಅವರ ಬಿಗ್ ಬಜೆಟ್ ಸಿನಿಮಾ ‘2.0’ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿರುವ ಲೈಕಾ ಇದೀಗ ನಟ ಅಜಿತ್ ಕುಮಾರ್ ಕಾಂಬಿನೇಷನ್‌ನಲ್ಲಿ ಒಂದು ಚಿತ್ರ ಹಾಗೂ ರಾಘವ್ ಲಾರೆನ್ಸ್ ಜೊತೆ ಒಂದು ಚಿತ್ರವನ್ನು ಮಾಡುವುದಾಗಿ ಘೋಷಣೆ ಮಾಡಿದೆ.
ನಯನತಾರಾ ಅವರನ್ನು ಇತ್ತೀಚೆಗಷ್ಟೇ ಮದುವೆಯಾಗಿರುವ ನಿರ್ದೇಶಕ ವಿಘ್ನೇಶ್ ಶಿವನ್ ನಿರ್ದೇಶನದಲ್ಲಿ ಅಜಿತ್ ಕುಮಾರ್ ಅವರ 62 ನೇ ಸಿನಿಮಾ ಪ್ರಾರಂಭವಾಗುತ್ತಿದೆ. ಈ ಸಿನಿಮಾಕ್ಕೆ ಅನಿರುದ್ಧ ಅವರ ಸಂಗೀತವಿದ್ದು ಸುಭಾಸ್ಕರನ್ ಅವರು ನಿರ್ಮಾಣ ಮಾಡುತ್ತಿದ್ದಾರೆ ಎಂದು ಲೈಕಾ ತಿಳಿಸಿದೆ.
ಇನ್ನು ನಾಗವಲ್ಲಿ ಖ್ಯಾತಿಯ ಸೂಪರ್ ಹಿಟ್ ಚಿತ್ರ ಚಂದ್ರಮುಖಿಯ ಎರಡನೇ ಭಾಗವನ್ನು ಲೈಕಾ ನಿರ್ಮಾಣ ಮಾಡುತ್ತಿದೆ. ರಾಘವ ಲಾರೆನ್ಸ್ ಪ್ರಮುಖ ಪಾತ್ರದಲ್ಲಿರುವ ‘ಚಂದ್ರಮುಖಿ 2’ ಸಿನಿಮಾಕ್ಕೆ ಪಿ.ವಾಸು ಆಕ್ಸನ್ ಕಟ್ ಹೇಳುತ್ತಿದ್ದಾರೆ. ಎಂ.ಎಂ ಕೀರವಾಣಿ ಅವರ ಸಂಗೀತವಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.