ADVERTISEMENT

ಧಕ್​ ಧಕ್​​ ಸುಂದರಿಗೆ 53!

​ಪ್ರಜಾವಾಣಿ ವಾರ್ತೆ
Published 15 ಮೇ 2020, 19:30 IST
Last Updated 15 ಮೇ 2020, 19:30 IST
ಮಾಧುರಿ ದೀಕ್ಷಿತ್‌
ಮಾಧುರಿ ದೀಕ್ಷಿತ್‌   

ಸೌಂದರ್ಯ, ಕಲೆ, ಅಭಿನೇತ್ರಿ,ಸೃಜನೆ ಮಾಧುರಿ ದೀಕ್ಷಿತ್‌ಗೆ ಹುಟ್ಟುಹಬ್ಬದ ಸಂಭ್ರಮ (ಮೇ 15, 1967). ಟ್ವೀಟರ್‌ನಲ್ಲಿ ಲಕ್ಷಾಂತರ ಅಭಿಮಾನಿಗಳು ಹಾಗೂ ಬಾಲಿವುಡ್‌ ಬಳಗ ಈ ಚೆಲುವಿನ ಗಣಿಗೆ ಹುಟ್ಟಿದ ದಿನದ ಶುಭಾಶಯ ಕೋರಿದ್ದಾರೆ.

1984 ರಲ್ಲಿ 'ಅಬೋಧ್' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಮಾಧುರಿ ದೀಕ್ಷಿತ್ ತಮ್ಮ ಸಿನಿ ಪಯಣದಲ್ಲಿ ಈ ವರೆಗೆ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ 'ರಾಮ್ ಲಖಾನ್', 'ಪರಿಂದ', 'ದಿಲ್', 'ಸಾಜನ್', 'ಬೇಟಾ', 'ಖಳನಾಯಕ್', 'ರಾಜ', 'ದಿಲ್ ತೋ ಪಾಗಲ್ ಹೈ', 'ದೇವ್‌ದಾಸ್' ಜನಪ್ರಿಯ ಸಿನಿಮಾಗಳು.

ಮುಂಬೈ ಮೂಲದ ಇವರು ಮರಾಠಿ ಕುಟುಂಬದ ಶಂಕರ್ ಮತ್ತು ಸ್ನೇಹಲತಾ ದೀಕ್ಷಿತ್ ಅವರ ಮಗಳು.

ADVERTISEMENT

ಮಾಧುರಿ ದೀಕ್ಷಿತ್ ಅವರರು ಸಿನಿಮಾ ರಂಗಕ್ಕೆ ನೀಡಿದ ಕೊಡುಗೆ ಮತ್ತು ಶ್ರಮಕ್ಕೆ ಆರು ಬಾರಿ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಪ್ರಶಸ್ತಿ ಹಾಗೂ ಒಂದು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. 12 ಬಾರಿಫಿಲ್ಮ್ ಫೇರ್ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ದಾಖಲೆ ಇವರದ್ದು. ಅಲ್ಲದೇ 2008ರಲ್ಲಿ ಮಾಧುರಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.

ಪ್ರತಿಪಾತ್ರದಲ್ಲೂ ಪ್ರಭಾವಿ ಅಭಿನಯ ತೋರುವ ಮಾಧುರಿನಗೆ ಮೊಗ, ಮುಗ್ಧ ಸೌಂದರ್ಯಕ್ಕೆ ಮನಸೋಲದವರಿಲ್ಲ. ನಿಪುಣ ಕಥಕ್ ನೃತ್ಯಗಾರ್ತಿ ಮಾಧುರಿಗೆ ಪ್ರತಿಸ್ಪರ್ಧಿ ಇಲ್ಲ.'ಕೌನ್ ಬನೇಗಾ ಕರೋಡ್ ಪತಿ' ಗೇಮ್ ಶೋ ಮೊದಲ ಸೀಸನ್ ನಲ್ಲಿ ಭಾಗವಹಿಸಿ 50 ಲಕ್ಷ ಗೆದ್ದಿದ್ದರು. ಈ ಹಣವನ್ನು ಅಂದೇ ಗುಜರಾತ್ ಭೂಕಂಪ ನಿರಾಶ್ರಿತರಿಗೆ ಮತ್ತು ಪುಣೆಯಲ್ಲಿನ ಅನಾಥಶ್ರಮಕ್ಕೆ ನೀಡಿದ್ದರು.

1991ರ ಸಾಜನ್ ಚಿತ್ರದ ಶೂಟಿಂಗ್ ಸಮಯದಲ್ಲಿ ಸಂಜಯ್ ಮತ್ತು ಮಾಧುರಿ ಹತ್ತಿರವಾದರು. ಈ ಚಿತ್ರದ ರೋಮ್ಯಾನ್ಸ್ ನೋಡಿದವರು ಇವರಿಬ್ಬರ ಜೋಡಿಯನ್ನು ಮನಸಾರೆ ಮೆಚ್ಚಿದ್ದರು. ಆದರೆ ಸಂಜಯ್‌ ದತ್ ಜೈಲು ಸೇರಿದಂತೆ ಇವರಿಬ್ಬರ ಪ್ರೇಮ ಮುರಿದು ಬಿತ್ತು. 1999ರಲ್ಲಿ, ಮಾಧುರಿ ಯುಎಸ್ ಕಾರ್ಡಿಯೊ ಸರ್ಜನ್ ಶ್ರೀರಾಮ್ ಮಾಧವ್ ನೆನೆ ಅವರನ್ನು ವಿವಾಹವಾಗಿ ಅಮೆರಿಕಗೆ ತೆರಳಿರು. ಅವರಿಗೆಆರಿನ್ ಮತ್ತು ರಾಯನ್ ಇಬ್ಬರು ಮಕ್ಕಳಿದ್ದಾರೆ.

’ಆಜಾ ನಚ್‌ಲೇ‘ ಸಿನಿಮಾ ಮೂಲಕಪುನಃ ಚಿತ್ರರಂಗಕ್ಕೆ ಪ್ರವೇಶ ಮಾಡಿದರು ಮಹತ್ವದಯಶಸ್ಸು ಕಾಣಲಿಲ್ಲ. ಭಾರತೀಯ ಸಿನಿಲೋಕದ ಮುಖ್ಯಭೂಮಿಕೆಯಲ್ಲಿ ಉಳಿಯುವಮಹತ್ವದ ನಟಿ ಮಾಧುರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.