ADVERTISEMENT

‘ಮಾಫಿಯಾ’ದಲ್ಲಿ ಫುಟ್‌ಬಾಲ್‌ ಆಡಿದ ಶೈನ್‌ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 13:21 IST
Last Updated 12 ಜೂನ್ 2022, 13:21 IST
ಶೈನ್‌ ಶೆಟ್ಟಿ
ಶೈನ್‌ ಶೆಟ್ಟಿ   

ಪ್ರಜ್ವಲ್‌ ದೇವರಾಜ್‌ ಅಭಿನಯದ ‘ಮಾಫಿಯಾ’ ಚಿತ್ರದ ಚಿತ್ರೀಕರಣ ಭರ್ಜರಿಯಾಗಿಯೇ ಸಾಗುತ್ತಿದೆ. ಇತ್ತೀಚೆಗೆ ಶೈನ್‌ ಶೆಟ್ಟಿ ಅವರು ಈ ಚಿತ್ರದ ದೃಶ್ಯವೊಂದರಲ್ಲಿ ಭರ್ಜರಿಯಾಗಿ ಫುಟ್‌ಬಾಲ್‌ ಆಡಿದ್ದಾರೆ.

ಪ್ರಜ್ವಲ್‌ ಅವರ ಜೊತೆಗೇ ಬೆರೆಯುವ ಪಾತ್ರ ಶೈನ್‌ ಅವರಿಗಿದೆ. ಪ್ರಜ್ವಲ್‌ ಪೊಲೀಸ್‌ ಅಧಿಕಾರಿ ಆಗಿರುವಂತೆಯೇ ಇವರೂ ಕೂಡಾ ಪೊಲೀಸ್‌ ಪಾತ್ರದಲ್ಲಿಯೇ ಇದ್ದಾರೆ.

‘ವಾಸ್ತವವಾಗಿ ನಾನು ಮತ್ತು ಪ್ರಜ್ವಲ್‌ ತುಂಬಾ ಆತ್ಮೀಯರಾಗಿದ್ದೇವೆ. ಸ್ಟಾರ್‌ ಸುವರ್ಣದ ರಿಯಾಲಿಟಿ ಶೋದಲ್ಲಿ ಪರಸ್ಪರ ಕಾಲೆಳೆಯುವ ಪ್ರಸಂಗವೊಂದಿತ್ತು. ಅದರಲ್ಲಿ ಪ್ರಜ್ವಲ್‌ ತುಂಬಾ ಮುಕ್ತವಾಗಿ ಇದ್ದರು. ಹೀಗಾಗಿ ಈ ಆತ್ಮೀಯತೆ ಇನ್ನಷ್ಟು ಗಟ್ಟಿಯಾಯಿತು. ಒಂದು ದಿನ ‘ಮಾಫಿಯಾ’ ನಿರ್ಮಾಪಕರು ಕರೆ ಮಾಡಿ ಈ ಪಾತ್ರದ ಬಗ್ಗೆ ಹೇಳಿದರು. ನಾನು ಒಪ್ಪಿದೆ. ಅಭಿನಯಿಸುವಾಗ ನನಗೆ ಹೊಸದೇನೂ ಅನಿಸಲಿಲ್ಲ. ಏಕೆಂದರೆ ಚಿತ್ರದ ಪಾತ್ರದಲ್ಲಿರುವಂತೆಯೇ ನಾನು ಮತ್ತು ಪ್ರಜ್ವಲ್‌ ನಿಜ ಜೀವನದಲ್ಲಿಯೂ ತುಂಬಾ ಆತ್ಮೀಯರಾಗಿದ್ದೇವೆ’ ಎಂದು ಒಂದೇ ಉಸಿರಿನಲ್ಲಿ ಹೇಳಿದರು ಶೈನ್‌.

ADVERTISEMENT

‘ನನ್ನ ಪಾತ್ರವಿರುವ ಭಾಗದ ಶೇ 50ರಷ್ಟು ಶೂಟಿಂಗ್‌ ಮುಗಿದಿದೆ. ಚಿತ್ರೀಕರಣ ಇನ್ನೂ ಮುಂದುವರಿದಿದೆ’ ಎಂದರು ಅವರು.

ನಿರ್ದೇಶಕ ಲೋಹಿತ್‌ಕುಮಾರ್‌ ಪ್ರತಿಕ್ರಿಯಿಸಿ, ‘ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಶೀಘ್ರವೇ ಚಿತ್ರ ನಿಮ್ಮ ಮುಂದೆ ಬರಲಿದೆ’ ಎಂದರು.

ಈ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿ. ದೇವರಾಜ್, ವಾಸುಕಿ ವೈಭವ್, ಸಿದ್ಲಿಂಗು ಶ್ರೀಧರ್, ಪ್ರಕಾಶ್ ಬೆಳವಾಡಿ,ಒರಟ ಪ್ರಶಾಂತ್, ರವಿ ಭಟ್ ತಾರಾಗಣದಲ್ಲಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.