ADVERTISEMENT

‘ಹಮ್‌ ದೋ, ಹಮಾರೆ ಬಾರಹ್‌‘ ಚಿತ್ರಕ್ಕೆ ಎಐಎಂಐಎಂ ಆಕ್ರೋಶ

ಪಿಟಿಐ
Published 7 ಜೂನ್ 2024, 16:21 IST
Last Updated 7 ಜೂನ್ 2024, 16:21 IST
ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ
ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ    

ಛತ್ರಪತಿ ಸಂಭಾಜಿನಗರ: ಹಿಂದಿ ಚಲನಚಿತ್ರ ‘ಹಮ್‌ ದೋ, ಹಮಾರೆ ಬಾರಹ್‌’ ಚಲನಚಿತ್ರದ ನಿರ್ಮಾಪಕರು ನಿರ್ದಿಷ್ಟ ಸಮುದಾಯ ಗುರಿಯಾಗಿಸಿ ಚಿತ್ರ ನಿರ್ಮಿಸಿದ್ದಾರೆ ಎಂದು ಎಐಎಂಐಎಂನ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಇಮ್ತಿಯಾಜ್‌ ಜಲೀಲ್‌ ಅವರು ಆರೋಪಿಸಿದ್ದಾರೆ.

ಅನ್ನೂ ಕಪೂರ್, ಪಾರ್ಥ್ ಸಮಥಾನ್ ನಟಿಸಿರುವ ಚಿತ್ರ ಇದೇ ಶುಕ್ರವಾರ ಬಿಡುಗಡೆ ಆಗಬೇಕಿತ್ತು. ನಿರ್ಮಾಪಕರ ಪ್ರಕಾರ, ಚಿತ್ರ ಬಿಡುಗಡೆಗೆ ಬಾಂಬೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಔರಂಗಾಬಾದ್‌ ಕ್ಷೇತ್ರದ ಮಾಜಿ ಸಂಸದರೂ ಆದ ಜಲೀಲ್‌, ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಚಿತ್ರವನ್ನು ಖಂಡಿಸಿದ್ದಾರೆ. ‘ಮನರಂಜನೆಯಲ್ಲ, ವಿವಾದ ಹುಟ್ಟುಹಾಕಿ ಹಣ ಸಂಪಾದಿಸುವ ಉದ್ದೇಶದಿಂದ ಚಿತ್ರ ನಿರ್ಮಿಸಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ. ಚಿತ್ರದ ಮೂಲಕ ಯಾವುದೇ ಸಮುದಾಯಕ್ಕೆ ಅಪಮಾನ ಆಗದಂತೆ ಸರ್ಕಾರವು ಜಾಗ್ರತೆ ವಹಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ಕರ್ನಾಟಕ ಸರ್ಕಾರವು ಎರಡು ವಾರ ಈ ಸಿನಿಮಾ ತೆರೆಕಾಣದಂತೆ ನಿಷೇಧ ಹೇರಿದೆ. ಸೆನ್ಸಾರ್‌ ಮಂಡಳಿಯ ಸೂಚನೆಯ ಮೇರೆಗೆ ‘ಹಮ್‌ ದೋ, ಹಮಾರೆ ಬಾರಹ್‌’ ಎಂದು ಇದ್ದ ಸಿನಿಮಾ ಶೀರ್ಷಿಕೆಯನ್ನು ‘ಹಮಾರೆ ಬಾರಹ್’ ಎಂದು ಬದಲಿಸಿರುವುದಾಗಿ ಸಿನಿಮಾ ತಯಾರಕರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.