ಎರಡು ವರ್ಷಗಳ ವಿರಾಮದ ನಂತರ ಮಲಯಾಳಂ ನಟಿ, ‘ಬೆಂಗಳೂರು ಡೇಸ್’ ಖ್ಯಾತಿಯ ನಸ್ರಿಯಾ ನಜೀಂ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಪತಿ, ನಟ ಫಹಾದ್ ಫಾಜಿಲ್ ನಾಯಕನಾಗಿರುವ ‘ಟ್ರಾನ್ಸ್’ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಅಂತಿಮ ಹಂತದಲ್ಲಿದೆ.
ಈ ಚಿತ್ರದಲ್ಲಿ ಶೋಭಿನ್ ಶಹೀರ್, ಗೌತಮ್ ಮೆನನ್, ಚೆಂಬನ್ ವಿನೋದ್, ವಿನಾಯಕನ್, ಶ್ರೀನಾಥ್ ಭಾಸಿ ಅವರು ಈ ಚಿತ್ರದಲ್ಲಿದ್ದಾರೆ. ಈ ಚಿತ್ರವನ್ನು ಅನ್ವರ್ ರಶೀದ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕ ಅಮಲ್ ನೀರಾದ್ ಅವರು ಸಿನಿಮಾಟೋಗ್ರಾಫರ್ ಆಗಿ ಬದಲಾಗಿದ್ದಾರೆ. ವಿನ್ಸೆಂಟ್ ಅವರ ಚಿತ್ರಕತೆ ಇದಕ್ಕಿದೆ. ಈ ಚಿತ್ರ ಡಿಸೆಂಬರ್ ತಿಂಗಳಲ್ಲಿ ತೆರೆ ಕಾಣುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.