ಕೋಲ್ಕತ್ತ: ಕೋಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕೃತ ಚಾಲನೆ ನೀಡಿದ್ದಾರೆ. ಎಂಟು ದಿನಗಳ ಕಾಲ ನಡೆಯುವ ಚಲನಚಿತ್ರೋತ್ಸವದಲ್ಲಿ ಹಲವು ಭಾಷೆಯ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ
ಕೋಲ್ಕತ್ತದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಈ ಸಮಾರಂಭದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್, ನಟ ಅನಿಲ್ ಕಪೂರ್, ಕ್ರಿಕೆಟಿಗ ಸೌರವ್ ಗಂಗೋಲಿ, ನಟಿ ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಸಲ್ಮಾನ್ ನಟನೆಯ ಟೈಗರ್–3 ಚಿತ್ರವು ಈ ವರ್ಷದ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದ್ದು, ಈ ಸಿನಿಮಾನದ ಅರಜಿತ್ ಸಿಂಗ್ ಹಾಡಿರುವ ಒಂದು ಹಾಡನ್ನು ವೇದಿಕೆಯಲ್ಲಿ ಪ್ರಸಾರ ಮಾಡಲಾಗಿತ್ತು. ಹಾಡಿಗೆ ಹೆಜ್ಜೆ ಹಾಕುವಂತೆ ಸಲ್ಮಾನ್ ಖಾನ್, ಮಮತಾ ಬ್ಯಾನರ್ಜಿ ಅವರಿಗೆ ಒತ್ತಾಯಿಸಿದ್ದು, ಎಲ್ಲರ ಒತ್ತಾಯಕ್ಕೆ ಮಣಿದು ಮಮತಾ ಬ್ಯಾನರ್ಜಿ ನೃತ್ಯ ಮಾಡಿದ್ದಾರೆ.
ಡಿಸೆಂಬರ್ 5ರಿಂದ ಪ್ರಾರಂಭವಾಗಿರುವ ಚಲನಚಿತ್ರೋತ್ಸವ ಡಿಸೆಂಬರ್ 12ರವರೆಗೆ ನಡೆಯಲಿದೆ.
ಸಲ್ಮಾನ್ ನನ್ನ ಇಷ್ಟದ ನಟ: ಸೌರವ್ ಗಂಗೋಲಿ
‘ನನ್ನ ನೆಚ್ಚಿನ ನಟ ಸಲ್ಮಾನ್ ಖಾನ್ ಅವರಿಗೆ ಕೋಲ್ಕತ್ತಗೆ ಸ್ವಾಗತ’ ಎಂದು ಸೌರವ್ ಗಂಗೋಲಿ ಹೇಳಿದ್ದಾರೆ.
ಚಲನಚಿತ್ರೋತ್ಸವದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಗಂಗೋಲಿ, ‘ಇದೇ ಮೊದಲ ಬಾರಿಗೆ ನಾನು ಸಲ್ಮಾನ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗುತ್ತಿದ್ದೇನೆ. ಇದುವೆರೆಗೂ ನಾವು ಭೇಟಿಯಾಗಲಿಲ್ಲ ಎಂಬುವುದೇ ದುರದೃಷ್ಟಕರ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.