ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ ಅಭಿನಯದ ಹೊಸ ಚಿತ್ರಕ್ಕೆ ‘ಶೈಲಾಕ್’ ಎಂದು ಹೆಸರಿಡಲಾಗಿದೆ.
‘ಮಾಸ್ಟರ್ಪೀಸ್’ ಚಿತ್ರದ ನಂತರ ನಟ ಮಮ್ಮುಟ್ಟಿ ಹಾಗೂ ಅಜಯ್ ವಾಸುದೇವ್ ಅವರು ಮತ್ತೊಮ್ಮೆ ಒಂದಾಗಿದ್ದಾರೆ. ಈ ಹೊಸ ಚಿತ್ರ ‘ಮಾಸ್ ಆ್ಯಕ್ಷನ್ ಫ್ಯಾಮಿಲಿ ಡ್ರಾಮಾ’ ಎಂದು ಚಿತ್ರತಂಡ ಹೇಳಿಕೊಂಡಿದೆ.
ಕೊಚ್ಚಿಯಲ್ಲಿ ಈ ಚಿತ್ರದ ಮುಹೂರ್ತ ನೆರವೇರಿದ್ದು, ಎರ್ನಾಕುಳಂ ಹಾಗೂ ಕೊಯಮುತ್ತೂರಿನಲ್ಲಿ ಚಿತ್ರದ ಬಹುಭಾಗ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಈ ಹಿಂದೆ ಅಜಯ್ ವಾಸುದೇವ ಅವರ ನಿರ್ದೇಶನದ ‘ರಾಜಾಧಿರಾಜ’ ಹಾಗೂ ‘ಮಾಸ್ಟರ್ಪೀಸ್’ನಲ್ಲಿ ಮಮ್ಮುಟ್ಟಿ ನಟಿಸಿದ್ದರು. ಗೋಪಿ ಸುಂದರ್ ಸಂಗೀತ, ರಣದೀವ್ ಅವರ ಸಿನಿಮಾಟೋಗ್ರಾಫಿ ಈ ಚಿತ್ರಕ್ಕಿದೆ. ಬಿಬಿನ್ ಜಾರ್ಜ್, ಸಿದ್ದಿಕ್, ಬೈಜು ಸಂತೋಷ್ ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.