ವಿಜ್ಞಾನ ಕಥೆಯ ‘ಮಂಡಲ’ ತೆರೆಗೆ ಬರಲು ದಿನಗಣನೆ ನಡೆದಿದೆ. ಈಗಾಗಲೇ ಫಸ್ಟ್‌ಲುಕ್‌ನಿಂದ ಮನಗೆದ್ದಿರುವ ಚಿತ್ರ ವಿಜ್ಞಾನ ಕಥಾ ಹಂದರದ ಜೊತೆಗೆ ಕೌಟುಂಬಿಕ ಸನ್ನಿವೇಶಗಳನ್ನೂ ಒಳಗೊಂಡಿದೆಯಂತೆ. 2018ರಲ್ಲಿ ಆರಂಭವಾದ ಈ ಚಿತ್ರ ಕೊರೊನಾ ಕಾರಣದಿಂದ ಸ್ವಲ್ಪ ವಿಳಂಬವಾಯಿತು. ಮಾರ್ಚ್ 10ರಂದು ಚಿತ್ರ ತೆರೆ ಕಾಣಲಿದೆ.
ಅಜಯ್ ಸರ್ಪೇಷ್ಕರ್ ಈ ಚಿತ್ರದ ನಿರ್ದೇಶಕರು. ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಅವರು ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಕೆಲಸಕ್ಕೆ ಗುಡ್‌ಬೈ ಹೇಳಿದರು.
ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಹೊರನಾಡು, ಕಿರಣ್ ಶ್ರೀನಿವಾಸ, ಸುಧಾ ಬೆಳವಾಡಿ, ನೀನಾಸಂ ಅಶ್ವಥ್, ಮನ್ ದೀಪ್ ರಾಯ್, ಕಿರಣ್ ನಾಯಕ್, ಸಮನ್ವಿತಾ ಶೆಟ್ಟಿ, ನರೇಶ್ ನರಸಿಂಹನ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಜೆಸ್ಸಿ ಕ್ಲಿಂಟನ್ ಸಂಗೀತ ನಿರ್ದೇಶನ, ರಾಮಿಶೆಟ್ಟಿ ಪವನ್ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣ,
ನಿತಿನ್ ಲುಕೋಸೆ ಸೌಂಡ್ ಡಿಸೈನ್, ಒಲಿವರ್ ಎಲ್ವಿಸ್ ಹಾಗೂ ಮನೋಜ್ ಬೆಳ್ಳೂರು ವಿಎಫ್‌ಎಕ್ಸ್ ಈ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.