ತಮಿಳು ನಟ ಸೂರ್ಯ ಅಭಿನಯದ ಚಿತ್ರ ‘ಸೂರಾರೈ ಪೋಟ್ರು’ವಿನ ಕನ್ನಡ ಅವತರಣಿಕೆಯಲ್ಲಿ ಮಂತ್ರ ಮಾಂಗಲ್ಯ ದೃಶ್ಯವೊಂದನ್ನು ಅಳವಡಿಸಲಾಗಿದೆ.
ರಾಷ್ಟ್ರಕವಿ ಕುವೆಂಪು ಅವರು ಪ್ರತಿಪಾದಿಸಿದ ಮಂತ್ರ ಮಾಂಗಲ್ಯ ಸರಳ ಮದುವೆಯ ಪರಿಕಲ್ಪನೆಯಲ್ಲೇ ಈ ಕಾರ್ಯಕ್ರಮ ನಡೆಯುತ್ತದೆ.ನಾಯಕ ಮಾರನ್ ಹಾಗೂ ನಾಯಕಿ ಪೊನ್ನಿ ಮದುವೆ ಆಗುವ ದೃಶ್ಯ ಇದು.
ಹಾಗೆಂದು ತಮಿಳು ಆವೃತ್ತಿಯಲ್ಲಿ ಇದೇ ದೃಶ್ಯ ಇಲ್ಲ. ಅಲ್ಲಿ ಕುವೆಂಪು ಬದಲಾಗಿ ಪೆರಿಯಾರ್ ಅವರ ಚಿತ್ರ ಬಳಸಲಾಗಿದೆ. ಹೀಗೆ ಪ್ರಾದೇಶಿಕ ಭಿನ್ನತೆಯನ್ನು ಅರಿತುಕೊಂಡು ಪ್ರೇಕ್ಷಕರನ್ನು ತಲುಪುವ ಯತ್ನ ನಡೆದಿದೆ.
ಕನ್ನಡದ ಕಥಾ ನಾಯಕ ಕರ್ನಾಟಕದ ಗೋರೂರಿನವನು. ತಮಿಳು ಆವೃತ್ತಿಯಲ್ಲಿ ಮಧುರೈ ಸಮೀಪದ ಹಳ್ಳಿಯೊಂದರ ಯುವಕ.
ಇದೇ ವೇಳೆ ‘ಸೂರರೈ ಪೋಟ್ರು’ ಸಿನಿಮಾವನ್ನು ಕನ್ನಡ ಅವತರಣಿಕೆಯಲ್ಲಿ ತಂದಿದ್ದಕ್ಕೆ ಕನ್ನಡ ಸಿನಿಪ್ರಿಯರು ಖುಷಿ ವ್ಯಕ್ತಪಡಿಸಿದ್ದಾರೆ.ಕನ್ನಡಿಗನೊಬ್ಬನ ಕಥೆಯನ್ನು (ಕ್ಯಾಪ್ಟನ್ ಜೆ.ಆರ್. ಗೋಪಿನಾಥ್) ತಮಿಳಿನಡಬ್ ಅವತರಣಿಕೆಯಲ್ಲಿ ನೋಡಬೇಕಾಯಿತು.ಈವಿಪರ್ಯಾಸ ತಂದು ಕೊಟ್ಟ ಕನ್ನಡ ಚಿತ್ರರಂಗಕ್ಕೆ ಕೋಟಿ ನಮನ. ಕನ್ನಡ ಸಿನಿಮಾ ಮಂದಿ ರೌಡಿಗಳು, ಅಪಹರಣಕಾರರ, ಗೂಂಡಾಗಳಜೀವನ ಚರಿತ್ರೆ ಬರೆಯುವುದರಲ್ಲಿ ಬ್ಯುಸಿ ಆಗಿದ್ದಾರೆ ಎಂದು ಹಲವರು ಟ್ವಿಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.