ತೆಲುಗಿನಲ್ಲಿ ಮಾಸ್ ಸಿನಿಮಾಗಳಿಗೆ ಕೇರಾಫ್ ಅಡ್ರಸ್ ಅಂದ್ರೆ ಬಾಲಯ್ಯ ಅಲಿಯಾಸ್ ನಂದಮೂರಿ ಬಾಲಕೃಷ್ಣ. ಈ ಬಾಲಯ್ಯ ಮತ್ತೊಂದು ಮಾಸ್ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.
ಬಾಲಯ್ಯ 'ಅಖಂಡ' ಆಗಿ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಸಿನಿಮಾದ ಬಗ್ಗೆ ಟಾಲಿವುಡ್ನಲ್ಲಿ ಟ್ರೆಂಡ್ ಶುರುವಾಗಿದೆ. ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಯುಟ್ಯೂಬ್ನಲ್ಲಿ ಬಿಡುಗಡೆಯಾಗಿ ವಾರದಲ್ಲಿ 2 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ ಎಂದು ಚಿತ್ರತಂಡ ಹೇಳಿಕೆ ನೀಡಿದೆ. ಇದು ಬಾಲಕೃಷ್ಣ ಸಿನಿಮಾ ಇತಿಹಾಸದಲ್ಲೇ ಹೊಸ ಮೈಲಿಗಲು ಎಂದು ಚಿತ್ರತಂಡ ತಿಳಿಸಿದೆ.
ಖ್ಯಾತ ನಿರ್ದೇಶಕ ಬಾಯಿಪಾಟು ಸೀನು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ರವೀಂದ್ರ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.
ಪ್ರಜ್ಞ್ಯಾ ಜೈಸ್ವಾಲ್ ನಾಯಕಿಯಾದರೆ, ಶ್ರೀಕಾಂತ್ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈ ಸಿನಿಮಾ ಡಿಸೆಂಬರ್ 2ರಂದು ವಿಶ್ವದಾದ್ಯಂತ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.