ADVERTISEMENT

ಮಗುವಿನ ನಿರೀಕ್ಷೆಯಲ್ಲಿದ್ದರು ಚಿರಂಜೀವಿ ಸರ್ಜಾ- ಮೇಘನಾ ದಂಪತಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 12:26 IST
Last Updated 7 ಜೂನ್ 2020, 12:26 IST
ಮೇಘನಾ - ಚಿರಂಜೀವಿ ಸರ್ಜಾ ದಂಪತಿ
ಮೇಘನಾ - ಚಿರಂಜೀವಿ ಸರ್ಜಾ ದಂಪತಿ   

ಬೆಂಗಳೂರು: ನಟ ಚಿರಂಜೀವಿ ಸರ್ಜಾಮತ್ತು ನಟಿ ಮೇಘನಾ 2018ರಲ್ಲಿ ಮದುವೆಯಾಗಿದ್ದು, ಮೇಘನಾ ಈಗ 5 ತಿಂಗಳ ಗರ್ಭಿಣಿ. ಮಗುವಿನ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಇತ್ತೀಚೆಗಷ್ಟೇ ಪುಟ್ಟ ನಾಯಿಮರಿಯೊಂದನ್ನು ತಂದಿದ್ದರು ಚಿರು.

ಈ ದಂಪತಿಗಳಿಗೆ ನಾಯಿ ಎಂದರೆ ಒಲವು ಜಾಸ್ತಿಯೇ. ಕಳೆದ ವರ್ಷ ಇವರಿಬ್ಬರೂನಟ ದರ್ಶನ್‌ಗೆ ನಾಯಿಮರಿಯೊಂದನ್ನು ಉಡುಗೊರೆಯಾಗಿ ನೀಡಿದ್ದರು.

ಫಿಟ್‌ನೆಸ್ ಮೇಲೆ ಅಪಾರ ಶ್ರದ್ಧೆ ಇದ್ದ ಚಿರಂಜೀವಿ ಸರ್ಜಾ ಶನಿವಾರವೂ ಜಿಮ್‌ಗೆ ಹೋಗಿದ್ದರು ಎಂದು ಮೂಲಗಳು ಹೇಳಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.