ಸ್ಯಾಂಡಲ್‌ವುಡ್‌ನಲ್ಲಿಗ್ಲ್ಯಾಮರಸ್ ಪಾತ್ರಗಳಿಗೆ ಬಣ್ಣಹಚ್ಚಿದ್ದ ನಟಿಮೇಘನಾಗಾಂವ್ಕರ್ ಇದೇ ಮೊದಲ ಬಾರಿಗೆ ಖಡಕ್ ಪೊಲೀಸ್ ಅಧಿಕಾರಿ ಪಾತ್ರವೊಂದನ್ನು ಒಪ್ಪಿಕೊಂಡಿದ್ದಾರೆ.
2020ರಲ್ಲಿ ಬಿಡುಗಡೆಯಾಗಿದ್ದ ನಟ ರಮೇಶ ಅರವಿಂದ್ ಅವರ 101ನೇ ಚಿತ್ರ ‘ಶಿವಾಜಿ ಸುರತ್ಕಲ್’ ಎರಡನೇ ಭಾಗ ಡಿಸೆಂಬರ್‌ನಲ್ಲಿ ಸೆಟ್ಟೇರಲಿದ್ದು, ಚಿತ್ರದಲ್ಲಿಡಿಸಿಪಿಹುದ್ದೆಯಲ್ಲಿರುವ ಯುವ ಐಪಿಎಸ್ ಅಧಿಕಾರಿ ‘ದೀಪಕಾಮತ್’ ಪಾತ್ರದಲ್ಲಿ ಮೇಘನಾ ಕಾಣಿಸಿಕೊಳ್ಳಲಿದ್ದಾರೆ.
ಶಿವಾಜಿ ಸುರತ್ಕಲ್ ಆಗಿ ಕಾಣಿಸಿಕೊಂಡ ರಮೇಶ್ ಅರವಿಂದ್ ಅವರ ಜೊತೆ ರಾಧಿಕಾ ನಾರಾಯಣ್, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿಯವರು ಅವರವರ ಪಾತ್ರದಲ್ಲಿ ಮುಂದುವರಿಯಲಿದ್ದು, ಇನ್ನಷ್ಟು ಪ್ರಮುಖ ಪಾತ್ರಗಳು ಸೇರಿಕೊಳ್ಳಲಿವೆ. ಚಿತ್ರದಲ್ಲಿ ಪ್ರಮುಖ ಪಾತ್ರವಾದದೀಪಕಾಮತ್, ಶಿವಾಜಿ ಸುರತ್ಕಲ್ ಅವರಿಗೆ ಬೆನ್ನೆಲುಬಾಗಿ ನಿಲ್ಲುವ ಮತ್ತು ಮೇಲಧಿಕಾರಿಯ ಪಾತ್ರವಾಗಿರುತ್ತದೆ. ಇನ್ನಷ್ಟು ಹೊಸ ತಾರಾಗಣ ಚಿತ್ರತಂಡ ಸೇರಲಿದ್ದು ಚಿತ್ರದ ನಿರ್ಮಾಣದ ಕೆಲಸವು ಈಗಾಗಲೇ ನಡೆಯುತ್ತಿದೆ, ಕೆಲವೇ ದಿನದಲ್ಲಿ ಮುಹೂರ್ತ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.
‘ಡಿಸೆಂಬರ್‌ನಿಂದ ಬೆಂಗಳೂರು, ಮೈಸೂರು, ಮಂಗಳೂರು, ಸುರತ್ಕಲ್, ಉಡುಪಿ, ಯಲ್ಲಾಪುರದಲ್ಲಿ 45 ದಿನ ಚಿತ್ರೀಕರಣ ನಡೆಯಲಿದೆ. ಎರಡನೇ ಭಾಗದಲ್ಲಿ ಒಂದಿಷ್ಟು ಹೊಸ ಪಾತ್ರಗಳು ಸೇರ್ಪಡೆಯಾಗಲಿವೆ. ಈ ಭಾಗದಲ್ಲಿ ಒಂದು ಯುವ ಐಪಿಎಸ್ ಅಧಿಕಾರಿಯ ಪಾತ್ರವನ್ನು ಸೃಷ್ಟಿಸಿದ್ದೆವು. ಈ ಪಾತ್ರಕ್ಕೆ ಯಾರು ಸರಿ ಹೊಂದುತ್ತಾರೆ ಎಂದು ಯೋಚಿಸುವ ಸಂದರ್ಭದಲ್ಲಿಮೇಘನಾಅವರು ಸೂಕ್ತ ಎಂದು ನಿರ್ಧರಿಸಿದೆವು.ಗ್ಲ್ಯಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ, ಅವರ ಮುಖದಲ್ಲಿ ಆ ಗಂಭೀರತೆ ಇದೆ. ಹಿಂದೆಂದೂ ಅವರು ಈ ರೀತಿಯ ಪಾತ್ರ ಮಾಡಿರಲಿಲ್ಲ.ಮೇಘನಾತಂದೆಯೂ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರಂತೆ. ಹೀಗಾಗಿಮೇಘನಾಅವರೂ ಖುಷಿಯಿಂದ ಒಪ್ಪಿಕೊಂಡರು’ ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.
‘ಎರಡನೇ ಭಾಗವು ಬಹುಕೋನಗಳಿರುವ ಚಿತ್ರಕಥೆ ಹೊಂದಿದ್ದು, ಪತ್ತೆದಾರಿ ಕಥೆಯಾಗಿರುವುದರಿಂದ ಕೊಲೆಗಾರನ ಹುಡುಕಾಟದ ಮಾರ್ಗದಲ್ಲಿ ಚಲಿಸುತ್ತಿರುತ್ತದೆ. ವಿಶೇಷವಾಗಿ ಶಿವಾಜಿ ಸುರತ್ಕಲ್ ಎಂಬ ಶೀರ್ಷಿಕೆಗೆ ಈ ಚಿತ್ರದಲ್ಲಿ ಉತ್ತರವಿದೆ’ ಎಂದಿದ್ದಾರೆ ಆಕಾಶ್. ರಮೇಶ್ ಅರವಿಂದ್ ಅವರ 103ನೇ ಚಿತ್ರ ಇದಾಗಿದ್ದು, ಚಿತ್ರವನ್ನು ರೇಖಾ.ಕೆ.ಎನ್ ಮತ್ತು ಅನುಪ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.