ಮುಂಬೈ: ಬಾಲಿವುಡ್ ನಟ ವಿಕ್ಕಿ ಕೌಶಲ್ ಅಭಿನಯದ 'ಸ್ಯಾಮ್ ಬಹದ್ದೂರ್' ಚಿತ್ರ ವಿಶ್ವಾದ್ಯಂತ ₹100 ಕೋಟಿ ಗಳಿಸಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ನಿರ್ಮಾಣ ಸಂಸ್ಥೆ ಆರ್ಎಸ್ವಿಪಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದೆ. ‘ಸ್ಯಾಮ್ ಬಹದ್ದೂರ್ ಗಲ್ಲಾಪೆಟ್ಟಿಗೆಯಲ್ಲಿ ಯಶ ಕಂಡಿದೆ. ಇದಕ್ಕೆ ನಾವು(ಆರ್ಎಸ್ವಿಪಿ) ಕೃತಜ್ಞರಾಗಿರುತ್ತೇವೆ. ಈ ಚಿತ್ರ ವಿಶ್ವಾದ್ಯಂತ ₹100 ಕೋಟಿಗಿಂತ ಅಧಿಕ ಗಳಿಕೆ ಕಂಡಿದೆ. ಇದು ಅದ್ಭುತವಾದ ಸಾಧನೆ' ಸಂಸ್ಥೆ ಹೇಳಿದೆ.
ದೇಶದ ಮೊದಲ ಫೀಲ್ಡ್ ಮಾರ್ಷಲ್, ಆರ್ಮಿ ಜನರಲ್ ಸ್ಯಾಮ್ ಮಾಣಿಕ್ ಶಾ ಅವರ ಜೀವನವನ್ನು ಆಧರಿಸಿದ ಚಿತ್ರವೇ 'ಸ್ಯಾಮ್ ಬಹದ್ದೂರ್'.
ಸ್ಯಾಮ್ ಮಾಣಿಕ್ ಶಾ ಅವರು 1971ರಲ್ಲಿ ನಡೆದ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ಜೀವನಾಧಾರಿತ ಚಿತ್ರದಲ್ಲಿ ವಿಕ್ಕಿ ಕೌಶಲ್ ಜತೆಗೆ ಸಾನ್ಯಾ ಮಲ್ಹೋತ್ರಾ, ನೀರಜ್ ಕಬಿ, ಫಾತಿಮಾ ಸನಾ ಶೇಖ್, ಎಡ್ವರ್ಡ್ ಸೊನ್ನೆನ್ಬ್ಲಿಕ್ ಹಾಗೂ ಮೊಹಮ್ಮದ್ ಜೀಶನ್ ಅಯ್ಯೂಬ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮೇಘನಾ ಗುಲ್ಜಾರ್ ನಿರ್ದೇಶನದ ಈ ಚಿತ್ರ ಡಿಸೆಂಬರ್ 1ರಂದು ಬಿಡುಗಡೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.