ನಿಜ ಘಟನೆಯೊಂದನ್ನು ಆಧರಿಸಿದ ಸಿನಿಮಾ ‘ಮಿಸ್ಸಿಂಗ್ ಬಾಯ್’ತೆರೆಕಾಣಲು ಸಿದ್ಧವಾಗಿದೆ. ಈಚೆಗೆ ನಟ ಸುದೀಪ್ ಅವರು ಈ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದರು.
‘ಈ ಸಿನಿಮಾದ ಕಥೆ ಏನೆಂದು ನನಗೆ ಗೊತ್ತಿಲ್ಲ. ನೈಜ ಘಟನೆ ಆಧರಿತ ಸಿನಿಮಾ ಎಂದು ತಂಡ ಹೇಳಿದೆ. ಈಚಿನ ದಿನಗಳಲ್ಲಿ ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳ ಮುಂದೆ ಸ್ಟಾರ್ ನಟರ ಸಿನಿಮಾಗಳು ಯಶಸ್ಸು ಕಾಣಲು ಹೆಣಗಾಡುವಂತಾಗಿದೆ. ಇದು ಒಳ್ಳೆಯ ಬೆಳವಣಿಗೆ’ ಎಂದು ಸುದೀಪ್ ಅವರು ಮಿಸ್ಸಿಂಗ್ ಬಾಯ್ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
‘ಸಿನಿಮಾದ ಕೆಲವು ತುಣುಕುಗಳಿಗೆ ಶಿವರಾಜ್ ಕುಮಾರ್ ಧ್ವನಿ ನೀಡಿದ್ದಾರೆ. ಸುದೀಪ್ ಅವರು ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಿರಿಯ ನಟರು ಕಿರಿಯರನ್ನು ಪ್ರೋತ್ಸಾಹಿಸಿದ್ದಾರೆ. ಈ ಮಿಸ್ಸಿಂಗ್ ಬಾಯ್ ಸಿನಿಮಾದಲ್ಲಿ ಗ್ರಾಫಿಕ್ಸ್ ಕೆಲಸ ಜಾಸ್ತಿ ಇದೆ ಎಂದು ಸಂಭಾಷಣೆ ಬರೆದು ಚಿತ್ರವನ್ನು ನಿರ್ದೇಶಿಸಿರುವ ರಘುರಾಮ್ ಡಿ.ಪಿ. ಸಂತಸ ಹಂಚಿಕೊಂಡರು.
ನಾಯಕ ನಟನಾಗಿ ಗುರುನಂದನ್ ಹಾಗೂ ನಾಯಕಿಯ ಪಾತ್ರದಲ್ಲಿ ಅರ್ಚನಾ ಜಯಕೃಷ್ಣ ಜಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ರವಿಶಂಕರ್ ಗೌಡ, ಜೈಜಗದೀಶ್, ವಿಜಯಲಕ್ಷೀ ಸಿಂಗ್ ಮುಂತಾದವರು ತಾರಾಗಣದಲ್ಲಿದ್ದಾರೆ. ಸಿನಿಮಾ ಮಾರ್ಚ್ 22 ರಂದು ತೆರೆಗೆ ಬರಲಿದೆ ಎಂದು ನಿರ್ಮಾಪಕ ಕೊಲ್ಲಾ ಪ್ರವೀಣ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.