ADVERTISEMENT

ನವಿರಾದ ಹಾಸ್ಯ, ತಂತ್ರಜ್ಞಾನ ಸಾಧನೆ ಹೇಳುವ ‘ಮಿಷನ್‌ ಮಂಗಲ್‌’ ಟ್ರೈಲರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 9:42 IST
Last Updated 19 ಸೆಪ್ಟೆಂಬರ್ 2019, 9:42 IST
   

ಮುಂಬೈ:ಭಾರತದ ಮಂಗಳಯಾನ ಸತ್ಯ ಕಥೆ ಆಧಾರಿತ, ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ‘ಮಿಷನ್‌ ಮಂಗಲ್‌’ನ ಟ್ರೈಲರ್‌ ಬಿಡುಗಡೆಯಾಗಿದೆ.

ಈಚೆಗೆ ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿನ ದೃಶ್ಯಗಳು, ಇಸ್ರೊದಿಂದ ಜುಲೈ 22ರಂದು ಉಡಾವಣೆಯಾಗಲಿರುವ ಚಂದ್ರಯಾನ–2ರ ಸಂದರ್ಭಕ್ಕೆ ಅನುಗುಣವಾಗಿ ಹೆಚ್ಚು ಮಹತ್ವ ಪಡೆದಿದೆ.

ಸಾಮಾನ್ಯರು ಹೇಗೆ ಅತ್ಯುತ್ನತ ಸಾಧನೆ ಮಾಡಬಲ್ಲರು ಎಂಬುದನ್ನು ನಿರ್ದೇಶಕ ಎಸ್‌.ಶಂಕರ್‌ ಹೇಳಲು ಹೊರಟಿದ್ದಾರೆ.

ADVERTISEMENT

ಈ ಚಿತ್ರದಲ್ಲಿ ನಟ ಅಕ್ಷಯ್‌ ಕುಮಾರ್‌, ನಟಿ ವಿದ್ಯಾಬಾಲನ್‌, ನಿತ್ಯಾ ಮೆನನ್‌, ಸೋನಾಕ್ಷಿ ಸಿನ್ಹಾ, ತಾಪ್ಸೀ ಪನ್ನು, ಕೃತಿ ಕುಲ್ಹಾರಿ, ಶರ್ಮನ್‌ ಜೋಷಿ ಅವರ ಜತೆಗೆ ಕನ್ನಡದ ಹಿರಿಯ ನಟ ಎಚ್‌.ಜಿ. ದತ್ತಾತ್ರೇಯ(ದತ್ತಣ್ಣ) ಅವರೂ ಮುಖ್ಯ ಪಾತ್ರವೊಂದಲ್ಲಿ ಅಭಿನಯಿಸಿದದಾರೆ. ನಿರ್ದೇಶಕ ಶಂಕರ್‌ ಕನ್ನಡಿಗ, ಬೆಂಗಳೂರಿನವರು ಹಾಗೂ ‘ಉಗ್ರಂ’ ಚಿತ್ರದ ಕನಾ ನಿರ್ದೇಶನ ವಿಭಾಗದಲ್ಲಿ ಕೆಲಸ ನಿರ್ವಹಿಸಿದ್ದರು ಎಂಬದು ವಿಶೇಷ.

ಟ್ರೈಲರ್‌ನಲ್ಲಿ, ಮೊದಲ ಚಂದ್ರಯಾನ ಉಡ್ಡಯನ ದೃಶ್ಯ ಮೊದಲುಗೊಂಡು, ಚಂದ್ರಯಾನದ ಕನಸು ಹೊತ್ತ ತಂತ್ರಜ್ಞರು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿರುವ ವಿಧಾನಸೌಧ, ಇಸ್ರೊ ಕಚೇರಿಯೂ ಕಾಣಿಕೊಳ್ಳುತ್ತದೆ. ಸಾಂಸಾರಿಕ ಬದುಕಿನಲ್ಲಿನ ನವಿರಾದ ಹಾಸ್ಯಗಳನ್ನೂ ಒಳಗೊಂಡು, ಮಂಗಳಯಾನ ಅಸಾಧ್ಯ ಎನ್ನುವ ನಿರಾಶೆಯ ಹಂತಗಳನ್ನು ಮೆಟ್ಟಿನಿಂತು ಸಾಧನೆಗೈಯುವ, ಅದರಲ್ಲಿ ಯಶ್ವಿಯಾಗುವ ಸಂಭ್ರಮಾಚರಣೆಯೂ ಮೂಡಿಬಂದಿವೆ.

ಅಂದಹಾಗೆ ಚಿತ್ರ, ಆಗಸ್ಟ್‌ 15ರಂದು ತೆರೆಕಾಣಲಿದೆ.

ಸಾಹೊ ಬಿಡುಗಡೆಯ ದಿನದಂದೇ ಅಕ್ಷಯ್‌ ಕುಮಾರ್ ಅವರ ‘ಮಿಷನ್ ಮಂಗಲ್’ ಮತ್ತು ಜಾನ್ ಅಬ್ರಹಾಂ ಅವರ ’ಬಾತ್ಲಾ ಹೌಸ್’ ಕೂಡಾ ಬಿಡುಗಡೆಯಾಗುತ್ತಿದ್ದು, ಪ್ರಭಾಸ್ ಚಿತ್ರ ತೀವ್ರ ಪೈಪೋಟಿ ಎದುರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.