ಅಕ್ಷಯ್ ಕುಮಾರ್ ನಟನೆಯ ‘ಮಿಷನ್ ಮಂಗಲ್’ ಸಿನಿಮಾದ ಬಂಗಾಳಿ ಟ್ರೇಲರ್ ಬಿಡುಗಡೆಗೊಂಡಿದೆ. ಕ್ರಿಕೆಟಿಗ ಸೌರವ್ ಗಂಗೂಲಿ ಸೇರಿದಂತೆ ಸಾಕಷ್ಟು ಗಣ್ಯರು ಸಿನಿಮಾ ತಂಡದ ಹೊಸ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
‘ಮಹಿಳಾ ವಿಜ್ಞಾನಿಗಳ ಸಾಧನೆಯನ್ನು ಸಿನಿಮಾ ಎತ್ತಿಹಿಡಿದಿದೆ.ಈ ಸಿನಿಮಾದಲ್ಲಿ ತೋರಿದ ಧೈರ್ಯ ಹಾಗೂ ಸಾಹಸಗಳನ್ನು ವರ್ಣಿಸಲು ಸಾಧ್ಯವಿಲ್ಲ. ತಂಡಕ್ಕೆ ನನ್ನ ಸೆಲ್ಯೂಟ್’ ಎಂದು ಗಂಗೂಲಿ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
‘ಧನ್ಯವಾದಗಳು ದಾದಾ, ವಿಜ್ಞಾನದ ಭಾಷೆ ಸಾರ್ವತ್ರಿಕವಾದದ್ದು, ಇದಕ್ಕೆ ಯಾವುದೇ ಧರ್ಮ ಇಲ್ಲ. ಬಣ್ಣ, ಲಿಂಗ ಹಾಗೂ ಗಡಿಯೂ ಇಲ್ಲ. ಮಹಿಳಾ ವಿಜ್ಞಾನಿಗಳಿಗೆ ನಾವು ಸೆಲ್ಯೂಟ್ ಮಾಡಬೇಕು. ಇದರಲ್ಲಿ ಏನಾದರೂ ತಪ್ಪಿದ್ದಲ್ಲಿ ಕ್ಷಮಿಸಿ’ ಎಂದುಅಕ್ಷಯ್, ಮರು ಟ್ವೀಟಿಸಿದ್ದಾರೆ.
ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಕವಿತೆಯೊಂದನ್ನು ವಾಚಿಸುವ ಸಂದರ್ಭ ಬರುತ್ತದೆ. ‘ಏ ಸಿಂಧೂರ್’ ಕವಿತೆಯನ್ನು ಅವರು ಎಲ್ಲಾ ಭಾಷೆಯಲ್ಲೂ ವಾಚಿಸಿದ್ದಾರೆ. ಇದು ಅಭಿಮಾನಿಗಳನ್ನು ಸೆಳೆದಿದೆ. ಬಂಗಾಳಿಯಲ್ಲಿ ಕವಿತೆ ಹೇಳುವ ಅಕ್ಷಯ್ ವಾಚನಾ ಸಾಮರ್ಥ್ಯವನ್ನು ಸೌರವ್ ಗಂಗೂಲಿ ಮೆಚ್ಚಿಕೊಂಡಿದ್ದಾರೆ. ‘ಬಂಗಾಳಿಯ ಈ ಕವಿತೆಯನ್ನು ಎಲ್ಲರೂ ಕೇಳಿಸಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.
ಮರಾಠಿಯಲ್ಲಿ ಪದ್ಯವನ್ನು ಓದಿದ್ದ ಅಕ್ಷಯ್ ಕುರಿತು ರಿತೇಶ್ ದೇಶ್‌ಮುಖ್ ಹಾಗೂ ಗುಜರಾತಿ ಭಾಷೆಯ ಪದ್ಯದ ಕುರಿತು ಪರೇಶ್ ರಾವಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 15ರಂದು ಜಗನ್ ಶಕ್ತಿ ನಿರ್ದೇಶನದ ಈ ಸಿನಿಮಾ ಹಿಂದಿ, ಗುಜರಾತಿ, ಮರಾಠಿ, ಪಂಜಾಬ್, ಬಂಗಾಳಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.