ಮಲಯಾಳಂ ಚಿತ್ರರಂಗದ ಇತ್ತೀಚಿನ ದೊಡ್ಡ ಹಿಟ್ ಚಿತ್ರವಾಗಿರುವ ‘ಲೂಸಿಫರ್’ಗೆ ಪ್ರೇಕ್ಷಕರು ಸ್ಪಂದಿಸಿದ ರೀತಿ ಕಂಡು ನಟ ಮೋಹನ್ ಲಾಲ್ ಮೂಕವಿಸ್ಮಿತರಾಗಿದ್ದಾರೆ.
ಬಾಕ್ಸಾಫೀಸಿನಲ್ಲಿ ₹ 200 ಕೋಟಿಗೂ ಹೆಚ್ಚು ಹಣವನ್ನು ಸಂಪಾದಿಸಿದ ‘ಲೂಸಿಫರ್’ ಯಶಸ್ಸಿಗಾಗಿ ಮೋಹನ್ ಲಾಲ್ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಚಿತ್ರದಲ್ಲಿ ಸ್ಟೀಫನ್ ಹೆಸರಿನ ನಾಯಕನ ಪಾತ್ರದಲ್ಲಿ ಲಾಲ್ ನಟಿಸಿದ್ದರು. ಚಿತ್ರದ ಯಶಸ್ಸಿಗಾಗಿ ಲಾಲ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಧನ್ಯವಾದ ಸಲ್ಲಿಸಿದ್ದು, ಇದೊಂದು ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.
ಪೃಥ್ವಿರಾಜ್ ಸುಕುಮಾರ್ ‘ಲೂಸಿಫರ್’ ನಿರ್ದೇಶಿಸಿದ್ದು, ಮುರಳಿ ಗೋಪಿ ಸ್ಕ್ರಿಪ್ಟ್ ಬರೆದಿದ್ದರು. ಮಾರ್ಚ್ 28ರಂದು ಸಿನಿಮಾ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಮೋಹನ್ ಲಾಲ್ ಜೊತೆಗೆ ಮಂಜು ವಾರಿಯರ್, ಟೊವಿಯೊ ಥಾಮಸ್, ಇಂದ್ರಜಿತ್, ವಿವೇಕ್ ಒಬೆರಾಯ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.