ದೃಶ್ಯಂ ಸರಣಿಯ ಮೂರನೇ ಭಾಗ ಸೆಟ್ಟೆರಲಿದೆ ಎಂದು ಚಿತ್ರ ನಿರ್ಮಾಪಕರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಇದು ಮಲಯಾಳಂನಲ್ಲಿ ತಯಾರಾಗಲಿದೆ. ದೃಶ್ಯಂ–3 ಈ ಹಿಂದಿನ ಎರಡು ಭಾಗಗಳ ಮುಂದುವರಿದ ಭಾಗವಾಗಿದೆ ಎಂದುಆಂಟೋನಿ ಪೆರಂಬವೂರ್ ಖಚಿಪಡಿಸಿದ್ದಾರೆ.
ಈ ಚಿತ್ರಕ್ಕೆ 'ದೃಶ್ಯಂ 3: ದಿ ಕನ್ ಕ್ಲೂಷನ್' ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ. ಮಲಯಾಳಂನಲ್ಲಿಜೀತು ಜೋಸೆಫ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಮಲಯಾಳಂನಲ್ಲಿ ಮೋಹನ್ ಲಾಲ್, ಕನ್ನಡದಲ್ಲಿ ರವೀಚಂದ್ರನ್ ಹಾಗೂ ತೆಲುಗಿನಲ್ಲಿ ವೆಂಕಟೇಶ್ ನಟಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.