ADVERTISEMENT

ನ.29ಕ್ಕೆ ತೆರೆ ಮೇಲೆ ಬಿಚ್ಚಿಕೊಳ್ಳಲಿವೆ 'ಮೂಕಜ್ಜಿಯ ಕನಸುಗಳು'

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 8:45 IST
Last Updated 27 ನವೆಂಬರ್ 2019, 8:45 IST
ಪಿ. ಶೇಷಾದ್ರಿ
ಪಿ. ಶೇಷಾದ್ರಿ   

‘ರಾಷ್ಟ್ರೀಯ ಆರ್ಕೈವ್ಸ್‌ ವಿಶೇಷ ಗೌರವ’ಕ್ಕೆ ಪಾತ್ರವಾಗಿರುವ ‘ಮೂಕಜ್ಜಿಯ ಕನಸುಗಳು’ ಸಿನಿಮಾ ವೀಕ್ಷಣೆ ಎಲ್ಲಿ, ಯಾವಾಗ ಎಂಬ ಪ್ರಶ್ನೆಗಳಿಗೆ ನಿರ್ದೇಶಕ ಪಿ. ಶೇಷಾದ್ರಿ ಉತ್ತರ ನೀಡಿದ್ದಾರೆ. ಈ ಚಿತ್ರವು ನವೆಂಬರ್ 29ರಂದು ತೆರೆಗೆ ಬರಲಿದೆ ಎಂದು ಅವರು ಹೇಳಿದ್ದಾರೆ.

ಚಿತ್ರ ತೆರೆಗೆ ಬರುತ್ತಿರುವುದನ್ನು ತಿಳಿಸಲು ಸುದ್ದಿಗೋಷ್ಠಿ ಕರೆದಿದ್ದ ಶೇಷಾದ್ರಿ, ‘ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಸಿನಿಮಾ ವೀಕ್ಷಿಸಿ, ಪ್ರಮಾಣಪತ್ರ ನೀಡಿ ಹನ್ನೊಂದು ತಿಂಗಳುಗಳು ಕಳೆದಿವೆ. ಈಗ ನಮ್ಮ ಸಿನಿಮಾ ಸಹಜ ಹೆರಿಗೆ ಕಾಣುತ್ತಿದೆ’ ಎಂದರು.

ಈ ಚಿತ್ರವನ್ನು ಇದಕ್ಕೂ ಮೊದಲೇ ತೆರೆಗೆ ತರಬೇಕು ಎಂಬ ಆಸೆ ಶೇಷಾದ್ರಿ ಅವರಲ್ಲಿ ಇತ್ತು. ಆದರೆ, ಬೇರೆ ಸಿನಿಮಾಗಳ ಬಿಡುಗಡೆ ಸೇರಿದಂತೆ ಹಲವು ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದರು ಶೇಷಾದ್ರಿ.

ADVERTISEMENT

ಮೂಕಜ್ಜಿಯ ಪಾತ್ರಕ್ಕೆ ಜೀವ ತುಂಬಿದ ಬಿ. ಜಯಶ್ರೀ ಅವರು ಸುದ್ದಿಗೋಷ್ಠಿಯಲ್ಲಿ ಇದ್ದರು. ‘ಕಾದಂಬರಿಯನ್ನು ಓದುವಾಗ ಕಂಡ ಮೂಕಜ್ಜಿ, ಸಿನಿಮಾ ಮಾಡುತ್ತಿದ್ದಾಗ ಕಠಿಣವಾಗಿ ಕಂಡಳು’ ಎಂದರು ಜಯಶ್ರೀ.

‘ಏಕ ಪರದೆಯ ಚಿತ್ರಮಂದಿರಗಳಲ್ಲಿ ಒಂದು ಪ್ರದರ್ಶನಕ್ಕೆ ಅವಕಾಶ ಪಡೆದುಕೊಳ್ಳುವುದೂ ಕಷ್ಟವಾಗಿದೆ. ಇಂತಹ ಸಿನಿಮಾಗಳನ್ನು ಜನರಿಗೆ ತಲುಪಿಸುವ ಬಗೆ ಹೇಗೆ ಎಂಬ ಪ್ರಶ್ನೆ ಎದುರಾಗಿದೆ’ ಎಂದು ಶೇಷಾದ್ರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.