ಬೆಂಗಳೂರು: ಕೆಜಿಎಫ್ ಖ್ಯಾತಿಯ ನಟಿ ಮತ್ತು ರೂಪದರ್ಶಿ ಮೌನಿ ರಾಯ್ ಅವರು ತಮ್ಮ ಗೆಳೆಯ, ಉದ್ಯಮಿ ಸೂರಜ್ ನಂಬಿಯಾರ್ ಜತೆ ಕಳೆದ ವಾರ ಗೋವಾದಲ್ಲಿ ಮದುವೆಯಾಗಿದ್ದಾರೆ.
ಮದುವೆಯ ಫೋಟೊಗಳನ್ನು ಸೂರಜ್ ಮತ್ತು ಮೌನಿ ರಾಯ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದರು.
ಈ ಬಾರಿ, ಮತ್ತಷ್ಟು ಫೋಟೊ ಮತ್ತು ಮದುವೆಯ ಮಧುರ ಕ್ಷಣಗಳ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಮೌನಿ ಪೋಸ್ಟ್ ಮಾಡಿದ್ದಾರೆ.
ಮದುವೆಯ ಸಂದರ್ಭದಲ್ಲಿ ಅವರು ಆನಂದಬಾಷ್ಪ ಸುರಿಸುವ ಕ್ಷಣಗಳೂ ವಿಡಿಯೊದಲ್ಲಿ ಸೆರೆಯಾಗಿದೆ.
ನಾಗಿನ್ ಧಾರಾವಾಹಿ ಸರಣಿ ಮೂಲಕ ಮೌನಿ ಅವರು ಕಿರುತೆರೆಯಲ್ಲೂ ಜನಪ್ರಿಯತೆ ಗಳಿಸಿದ್ದಾರೆ.
ಮದುವೆ ಬಳಿಕ ನಡೆದ ಪೂಲ್ ಪಾರ್ಟಿ, ಮದುವೆಗೆ ಮುಂಚಿನ ಹಳದಿಸಮಾರಂಭದ ಕ್ಷಣಗಳನ್ನು ಕೂಡ ಮೌನಿ, ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.