ADVERTISEMENT

ಪೇಜಾವರ ಸ್ವಾಮೀಜಿ ಕುರಿತ ಹೇಳಿಕೆ: ಕ್ಷಮೆಯಾಚಿಸಿದ ಹಂಸಲೇಖ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2021, 8:33 IST
Last Updated 15 ನವೆಂಬರ್ 2021, 8:33 IST
ಹಂಸಲೇಖ ಅವರ ಹೇಳಿಕೆಗೆ ರಾಜ್ಯದಾದ್ಯಂತ ಆಕ್ರೋಶ
ಹಂಸಲೇಖ ಅವರ ಹೇಳಿಕೆಗೆ ರಾಜ್ಯದಾದ್ಯಂತ ಆಕ್ರೋಶ   

ಬೆಂಗಳೂರು: ಪೇಜಾವರ ಸ್ವಾಮೀಜಿ ಮತ್ತು ಮಾಂಸಾಹಾರ ಸೇವನೆ ಕುರಿತಂತೆ ಹೇಳಿಕೆ ನೀಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ಸಂಗೀತ ನಿರ್ದೇಶಕ ಹಂಸಲೇಖ, ಫೇಸ್‌ಬುಕ್ ವಿಡಿಯೊ ಮೂಲಕ ಕ್ಷಮೆಯಾಚಿಸಿದ್ದಾರೆ.

ಮೈಸೂರಿನಲ್ಲಿ ನಡೆದಿದ್ದ ಪ್ರಶಸ್ತಿ ಪುರಸ್ಕಾರದ ಸಭೆಯಲ್ಲಿ ಹಂಸಲೇಖ ಅವರು, ದಲಿತರ ಮನೆಯಲ್ಲಿ ಪೇಜಾವರ ಶ್ರೀಗಳು ಕೋಳಿ ತಿನ್ನುತ್ತಾರಾ? ಲಿವರ್ ಕೊಟ್ಟರೆ ತಿನ್ನುತ್ತಾರಾ ಎಂದು ಕೇಳಿದ್ದರು. ಅಲ್ಲದೆ, ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಕುರಿತು ಕೂಡ ಪ್ರಸ್ತಾಪಿಸಿದ್ದರು.

ದಲಿತರ ಬಗೆಗಿನ ಅಸ್ಪೃಶ್ಯತೆ ಮತ್ತು ಆಹಾರ ಪದ್ಧತಿ ಬಗೆಗಿನ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಲೇ ಹಂಸಲೇಖ ಅವರು ವಿಡಿಯೊ ಮೂಲಕ ಜನತೆಯ ಕ್ಷಮೆಕೋರಿದ್ದಾರೆ.

ADVERTISEMENT

ಮೊದಲಿಗೆ ಕ್ಷಮೆ ಇರಲಿ, ಎರಡನೆಯದಾಗಿಯೂ ಕ್ಷಮೆ ಇರಲಿ ಎಂದು ಮಾತು ಆರಂಭಿಸಿದ ಹಂಸಲೇಖ, ನನ್ನ ಮಾತು ಪತ್ನಿಗೇ ಹಿಡಿಸಲಿಲ್ಲ, ಆಕೆಯ ಬಳಿಯೂ ಕ್ಷಮೆ ಕೋರಿದ್ದೇನೆ ಎಂದು ಹೇಳಿದ್ದಾರೆ.

ಹಂಸಲೇಖ ಅವರ ಹೇಳಿಕೆ ವಿಡಿಯೊಟ್ರೋಲ್‌ಗೂ ಗುರಿಯಾಗಿದ್ದು, ಸಾಮಾಜಿಕ ತಾಣದಲ್ಲೂ ಜನರಿಂದ ಪ್ರತಿಭಟನೆ ವ್ಯಕ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.