ADVERTISEMENT

Oscars 2023: RRR ನಾಟು ನಾಟು ಹಾಡು ರಚಿಸಲು 19 ತಿಂಗಳು ಬೇಕಾಗಿತ್ತು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮಾರ್ಚ್ 2023, 9:07 IST
Last Updated 13 ಮಾರ್ಚ್ 2023, 9:07 IST
   

ಹೈದರಾಬಾದ್: ಬ್ಲಾಕ್ ಬಸ್ಟರ್ ‘ಆರ್‌ಆರ್‌ಆರ್‌’ ಚಿತ್ರದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿರುವುದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ತಂದಿದೆ. ಈ ಹಾಡನ್ನು ರಚಿಸಿರುವ ಗೀತರಚನೆಕಾರ ಚಂದ್ರಬೋಸ್ ಅವರು ಆಶ್ಚರ್ಯಕರ ಮಾಹಿತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಹಿಂದೆ ಎನ್‌ಡಿಟಿವಿಯೊಂದಿಗೆ ಮಾತನಾಡಿದ್ದ ಅವರು, ನಾಟು ನಾಟು ಹಾಡನ್ನು ರಚಿಸಲು 19 ತಿಂಗಳು ಬೇಕಾಗಿತ್ತು ಎಂದಿದ್ದಾರೆ.

ನಮ್ಮ ಕೃಷಿ, ಬದುಕು, ಗ್ರಾಮೀಣ, ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಹಾಡು ಬರೆಯಲು ರಾಜಮೌಳಿ ಹೇಳಿದ್ದರು. ಅದರಂತೆ ಹಾಡು ರಚಿಸಲು ತೊಡಗಿಕೊಂಡಾಗ ಬದಲಾವಣೆ ಮಾಡುತ್ತಾ ಮಾಡುತ್ತಾ ಇಂದಿನ ನಾಟು ನಾಟು ಹಾಡು ಆಯಿತು ಎಂದಿದ್ದಾರೆ.

ADVERTISEMENT

‘ನಾಟು ನಾಟು’ಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿದೆ. ನನಗೆ ಅತ್ಯಂತ ಸಂತಸ ಮತ್ತು ಭಾವನಾಕತ್ಮಕ ವಿಷಯವಾಗಿದೆ. ಇದು ನನ್ನ ಹಿಂದಿನ ಪಯಣದ ಬಗ್ಗೆ ಯೋಚಿಸುವಂತೆ ಮಾಡಿದೆ’ಎಂದು ಚಂದ್ರಬೋಸ್ ಹೇಳಿದ್ದಾರೆ. ಇದಕ್ಕೆಲ್ಲ ರಾಜಮೌಳಿ, ಕೀರವಾಣಿ ಅವರೇ ಕಾರಣ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.