ಬೆಂಗಳೂರು: ಇಂದಿಗೂ ಸೂಪರ್ ಹಿಟ್ ಚಿತ್ರಗಳ ಸಾಲಿನಲ್ಲಿರುವ ವಿಷ್ಣುವರ್ಧನ್ ಅಭಿನಯದ ನಾಗರಹಾವು ಸಿನಿಮಾ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ನಟ ಸುದೀಪ್ ಟ್ವಿಟರ್ ಮೂಲಕ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಟ್ವೀಟಿಗರಿಂದ ಸಾಕಷ್ಟು ಪ್ರಶಂಸೆ ಹಾಗೂ ಕುತೂಹಲ ವ್ಯಕ್ತವಾಗಿದೆ. ‘ಮರಳಿದ್ದಾರೆ ರಾಮಚಾರಿ’ ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಡಾ.ವಿಷ್ಣುವರ್ಧನ್, ಅಂಬರೀಷ್, ಅಶ್ವಥ್ ಹಾಗೂ ಆರತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದ ನಾಗರಹಾವು ಸಿನಿಮಾಗೆ ನೂತನ ತಂತ್ರಜ್ಞಾನದ ಸ್ಪರ್ಶ ನೀಡಲಾಗಿದೆ. 7.1 ಡಿಟಿಎಸ್ ಸೌಂಡ್ ಹಾಗೂ ಸಿನಿಮಾ ಸ್ಕೋಪ್ ಅಳವಡಿಸಲಾಗಿದೆ.
ಈಶ್ವರಿ ಪ್ರೊಡಕ್ಷನ್ಸ್ ನಿರ್ಮಿಸಿದ್ದ ಸಿನಿಮಾ 1973ರಲ್ಲಿ ತೆರೆ ಕಂಡಿತ್ತು. ಗುರು–ಶಿಷ್ಯನ ಸಂಬಂಧ, ಪ್ರೀತಿ–ತ್ಯಾಗ, ಜಾತಿ–ಧರ್ಮ,...ಇಂಥ ಹಲವು ವಿಷಯಗಳಲ್ಲಿನ ಸಂಘರ್ಷವನ್ನು ಹೊಂದಿರುವ ಕಥೆ ಇಂದಿಗೂ ಪ್ರಸ್ತುತ. ರವಿಚಂದ್ರನ್ ಸಹೋದರ ನಿರ್ಮಾಪಕ ಬಾಲಾಜಿ ವೀರಸ್ವಾಮಿ ಮತ್ತೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.