ADVERTISEMENT

ಸಿನಿ–ಮಿನಿ ಕನ್ನಡ ಕಿರುಚಿತ್ರ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 23:54 IST
Last Updated 12 ಜುಲೈ 2024, 23:54 IST
   

ನಾಗತಿಹಳ್ಳಿ ಚಂದ್ರಶೇಖರ್‌ ಅವರ ಟೆಂಟ್‌ ಸಿನಿಮಾ ಹಾಗೂ ಸತ್ಯ ಹೆಗಡೆ ಸ್ಟುಡಿಯೋಸ್‌ ಜಂಟಿಯಾಗಿ ‘ಸಿನಿ ಮಿನಿ’ ಎಂಬ ಕನ್ನಡ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ. 

ಕಿರುಚಿತ್ರಗಳು 20 ನಿಮಿಷಗಳ ಒಳಗಿನ ಅವಧಿಯದ್ದಾಗಿರಬೇಕು ಹಾಗೂ ಕಿರುಚಿತ್ರಗಳನ್ನು ಸಲ್ಲಿಸಲು ಆಗಸ್ಟ್‌ 15 ಕೊನೆಯ ದಿನಾಂಕ. ‘ಕಿರುಚಿತ್ರಗಳು ಕನ್ನಡದಲ್ಲೇ ಇರಬೇಕು. ಸಾಕ್ಷ್ಯಚಿತ್ರಗಳಿಗೆ ಸ್ಪರ್ಧೆಯಲ್ಲಿ ಅವಕಾಶವಿಲ್ಲ. ಡಿಜಿಟಲ್‌ ಆ್ಯನಿಮೇಷನ್‌ ಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬಹುದು. ಸ್ಪರ್ಧಿಗಳು ಒಂದಕ್ಕಿಂತ ಹೆಚ್ಚು ಕಿರುಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬಹುದು. 2023 ಜನವರಿ 1ರ ಮೊದಲು ಚಿತ್ರೀಕರಣ ಪೂರ್ಣಗೊಂಡ ಸಿನಿಮಾಗಳಿಗೆ ಅವಕಾಶವಿಲ್ಲ. ₹1000 ಪ್ರವೇಶ ಶುಲ್ಕವಿದೆ’ ಎಂದು ಆಯೋಜಕರು ತಿಳಿಸಿದ್ದಾರೆ. ಒಟ್ಟು 9 ವಿಭಾಗಗಳಲ್ಲಿ ಪ್ರಶಸ್ತಿಗಳು ಇರಲಿದ್ದು, ಹೆಚ್ಚಿನ ಮಾಹಿತಿಗೆ 99005 55255 ಅಥವಾ 7795901860 ಸಂಖ್ಯೆಗಳನ್ನು ಸಂಪರ್ಕಿಸಿ. https://tentcinema.com/application-for-cini-mini/ ಭೇಟಿ ನೀಡಿ.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT