ನಟ ಸುಶಾಂತ್ ಸಿಂಗ್ ರಜಪೂತ್ ಅಕಾಲಿಕ ಸಾವಿನ ಬಗ್ಗೆ ಬಾಲಿವುಡ್ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣೀರು ಸುರಿಸುತ್ತಿರುವಾಗಲೇ ನಟ ನಾನಾ ಪಾಟೇಕರ್ ಸದ್ದಿಲ್ಲದೆ ಬಿಹಾರದ ಸುಶಾಂತ್ ಮನೆಗೆ ಹೋಗಿ ಸಾಂತ್ವನ ಹೇಳಿ ಬಂದಿದ್ದಾರೆ.
ಪಟ್ನಾದ ರಾಜೀವ್ ನಗರದಲ್ಲಿರುವ ಸುಶಾಂತ್ ಸಿಂಗ್ ರಜಪೂತ್ ಮನೆಯಲ್ಲಿ ಅವರ ಕುಟುಂಬದವರು ಭಾನುವಾರಶ್ರದ್ಧಾಂಜಲಿ ಸಭೆ ಆಯೋಜಿಸಿದ್ದರು. ಯಾರಿಗೂ ಚಿಕ್ಕದೊಂದು ಸುಳಿವು ನೀಡದೆ ಶ್ರದ್ಧಾಂಜಲಿ ಸಭೆಗೆ ಹಾಜರಾದ ನಾನಾ, ಅಗಲಿದ ನಟನಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಸುಶಾಂತ್ ತಂದೆ ಎಂ.ಕೆ. ಸಿಂಗ್ ಮತ್ತು ಕುಟುಂಬ ಸದಸ್ಯರನ್ನು ಕಂಡು ಸಾಂತ್ವನ ಹೇಳಿದರು.
ನಾನಾ ಪಾಟೇಕರ್ ಬರುವುದು ಅಲ್ಲಿರುವ ಯಾರಿಗೂ ತಿಳಿದಿರಲಿಲ್ಲವಂತೆ. ಇದಕ್ಕೂ ಮೊದಲು ಸಿಆರ್‌ಪಿಎಫ್ ಯೋಧರನ್ನು ಕಂಡು ಅವರು ಕ್ಷೇಮ ಸಮಾಚಾರ ವಿಚಾರಿಸಿದರು. ಸುಶಾಂತ್ ಮನೆ ಹೊರಗೆ ನಿಂತಿದ್ದ ಅಭಿಮಾನಿಯೊಬ್ಬ ಇದನ್ನೆಲ್ಲ ವಿಡಿಯೊ ಮಾಡಿ ಟ್ವೀಟರ್‌ನಲ್ಲಿ ಹರಿಬಿಟ್ಟಿದ್ದಾನೆ.
ಭೋಜಪುರಿ ನಟ ಮತ್ತು ರಾಜಕಾರಣಿ ಮನೋಜ್ ತಿವಾರಿ, ನಟ ಅಕ್ಷರಾ ಸಿಂಗ್ ಮತ್ತು ನಾನಾ ಪಾಟೇಕರ್ ಹೊರತುಪಡಿಸಿದರೆ ಬಾಲಿವುಡ್‌ನ ಬೇರೆ ಯಾವ ನಟ, ನಟಿಯರು ಅಲ್ಲಿ ಕಾಣಿಸಿಕೊಂಡಿಲ್ಲ.
‘ಈ ಬಾಲಿವುಡ್ ಮಂದಿಯನ್ನು ನಂಬಲೇಬೇಡಿ. ಇವರನ್ನು ಒಳಗೆ ಬಿಟ್ಟುಕೊಳ್ಳಬೇಡಿ. ಸುಶಾಂತ್ ಸಿಂಗ್ ಸಾವಿಗೆ ನ್ಯಾಯಬೇಕು’ ಎಂದು ಕೆಲವರು ಹರಿಹಾಯ್ದಿದ್ದಾರೆ. ಬಾಲಿವುಡ್ ಥಳಕು–ಬಳಕಿನ ಲೋಕದ ಹಂಗಿನಿಂದ ದೂರವಿರುವನಾನಾ ಪಾಟೇಕರ್ಮಾನವೀಯ ಗುಣಗಳ ಅಪರೂಪದ ವ್ಯಕ್ತಿ. ರಿಯಲ್ ಹೀರೊ ಎಂದು ಹಲವರು ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.