ADVERTISEMENT

ಬಾಲಿವುಡ್‌ ನಟ ನಾಸಿರುದ್ದೀನ್ ಷಾ ಆಸ್ಪತ್ರೆಗೆ ದಾಖಲು

ಪಿಟಿಐ
Published 30 ಜೂನ್ 2021, 8:45 IST
Last Updated 30 ಜೂನ್ 2021, 8:45 IST
ನಾಸಿರುದ್ದೀನ್ ಶಾ
ನಾಸಿರುದ್ದೀನ್ ಶಾ   

ಮುಂಬೈ: ‘ಹಿರಿಯ ಬಾಲಿವುಡ್‌ ನಟ ನಾಸಿರುದ್ದೀನ್ ಷಾ ಅವರಿಗೆ(70) ನ್ಯುಮೊನಿಯಾ ಇರುವುದು ಪತ್ತೆಯಾಗಿದ್ದು, ಅವರನ್ನು ಇಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ’ ಎಂದು ಅವರ ಪತ್ನಿ ರತ್ನಾ ಪಾಠಕ್‌ ಅವರು ಬುಧವಾರ ತಿಳಿಸಿದರು.

ನಾಸಿರುದ್ದೀನ್ ಅವರನ್ನು ಖಾರ್‌ ಹಿಂದೂಜಾ ಆಸ್ಪತ್ರೆಗೆ ಮಂಗಳವಾರ ದಾಖಲಿಸಲಾಗಿದೆ. ಅವರ ಶ್ವಾಸಕೋಶದಲ್ಲಿ ನ್ಯುಮೊನಿಯಾದ ಸಣ್ಣ ಪ್ಯಾಚ್‌ಗಳಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ಅವರ ಆರೋಗ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಾಸಿರುದ್ದೀನ್ ಅವರು ಚಿಕಿತ್ಸೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಹಾಗಾಗಿ ಆಸ್ಪತ್ರೆಯಿಂದ ಶೀಘ್ರದಲ್ಲೇ ಬಿಡುಗಡೆಗೊಳ್ಳಬಹುದು ಎಂದು ರತ್ನಾ ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.