ADVERTISEMENT

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕಿ ಸುಮಿತ್ರಾ ಭಾವೆ ನಿಧನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 6:35 IST
Last Updated 19 ಏಪ್ರಿಲ್ 2021, 6:35 IST
ಮರಾಠಿ ಚಲನಚಿತ್ರ ನಿರ್ದೇಶಕಿ ಸುಮಿತ್ರ ಭಾವೆ –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್
ಮರಾಠಿ ಚಲನಚಿತ್ರ ನಿರ್ದೇಶಕಿ ಸುಮಿತ್ರ ಭಾವೆ –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್   

ಮುಂಬೈ: ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮರಾಠಿ ಚಿತ್ರ ನಿರ್ದೇಶಕಿ ಸುಮಿತ್ರಾ ಭಾವೆ (78) ಸೋಮವಾರ ನಿಧನರಾದರು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಪುಣೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ.

ಸುಮಿತ್ರಾ ಭಾವೆ ಸಾಮಾಜಿಕ ಚಳವಳಿಯಲ್ಲಿಯೂ ಸಕ್ರಿಯರಾಗಿದ್ದವರು. 1984ರಲ್ಲಿ ‘ಬಾಯಿ’ ಚಿತ್ರ ನಿರ್ದೇಶನದ ಮೂಲಕ ಅವರ ಕಲಾತ್ಮಕ ಪಯಣ ಆರಂಭವಾಗಿತ್ತು.

ADVERTISEMENT

ಮರಾಠಿ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಹುಟ್ಟು ಹಾಕಿದವರಲ್ಲಿ ಸುಮಿತ್ರಾ ಭಾವೆ ಮತ್ತು ಸುನಿಲ್ ಸುಖ್ತಂಕರ್ ಜೋಡಿ ಪ್ರಮುಖರು. ಈ ಜೋಡಿಯ 'ಕಾಸವ್' ಸಿನಿಮಾಗೆ 2016ರಲ್ಲಿ ಸ್ವರ್ಣಕಮಲ ಪ್ರಶಸ್ತಿ ಬಂದಿತ್ತು. ಸಂಹಿತಾ, ಅಸ್ತು, ಏಕ್ ಕಪ್ ಚಾ, ಬಂಧಾ ಅವರು ನಿರ್ದೇಶಿಸಿದ ಕೆಲವು ಸಿನಿಮಾಗಳು.

ಭಾವೆ ಅವರು ಇಳಿವಯಸ್ಸಿನಲ್ಲಿಯೂ ನಿರ್ದೇಶನದಲ್ಲಿ ತೊಡಗಿಕೊಂಡಿದ್ದರು. ರಾಷ್ಟ್ರಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.

***

ಸುಮಿತ್ರಾ ಭಾವೆ ಅವರು 2018ರ ಮಾರ್ಚ್‌ನಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸದ ಕನ್ನಡ ಸ್ಪರ್ಧಾ ವಿಭಾಗದ ನಿರ್ಣಾಯಕರಾಗಿದ್ದರು. ಆ ಸಂದರ್ಭದಲ್ಲಿ ಅವರ ಜೊತೆಗೆ ‘ಪ್ರಜಾವಾಣಿ’ಯ ಪದ್ಮನಾಭ ಭಟ್ ನಡೆಸಿದ ಸಂದರ್ಶನದ ಲಿಂಕ್ ಇಲ್ಲಿದೆ. ‘ಮಹಿಳಾ ದಿನ’ದ ನಿಮಿತ್ತ ಈ ವಿಶೇಷ ಸಂದರ್ಶನ ಪ್ರಕಟವಾಗಿತ್ತು.

ಮರಾಠಿ ಚಲನಚಿತ್ರ ನಿರ್ದೇಶಕಿ ಸುಮಿತ್ರ ಭಾವೆ –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.